HomeGadag Newsಬ್ಯೂಟಿ ಪಾರ್ಲರ್‌ನಲ್ಲಿ ಗ್ರಾಹಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ನೌಕರನಿಗೆ 15 ತಿಂಗಳು ಜೈಲು

ಬ್ಯೂಟಿ ಪಾರ್ಲರ್‌ನಲ್ಲಿ ಗ್ರಾಹಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ನೌಕರನಿಗೆ 15 ತಿಂಗಳು ಜೈಲು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಒಂದು ಯುನಿಸೆಕ್ಸ್ ಸಲೂನ್ ಬ್ಯೂಟಿ ಪಾರ್ಲರ್ (ಪುರುಷ ಮತ್ತು ಮಹಿಳಾ ಕೆಲಸಗಾರರು ಮಹಿಳೆ ಮತ್ತು ಪುರಷರಿಗೆ ಸೇವೆ ಮಾಡುವ ಸಲೂನ್) ಒಂದರಲ್ಲಿ ಮಹಿಳೆಯೊಬ್ಬಳು ತನ್ನ ಹೇರ್ ಸೆಟ್ಟಿಂಗ್ ಮಾಡಿಸಲು 16,000 ರೂ.ಗಳನ್ನು ಪಾವತಿಸಿದ್ದು, 4 ಸಿಟ್ಟಿಂಗ್‌ಗಳಲ್ಲಿ ಸದರಿ ಟ್ರೀಟ್‌ಮೆಂಟ್ ನಡೆದಿತ್ತು. ಈ ಪ್ರಕರಣದ ಆರೋಪಿಯಾದ ಸೋನು, ಮಹಮೂದ್, ಆವೇದ್, ಕುಡಾ, ಅಲಿಸೇರ್, ಚಂಡಿಗಢ ಎಂಬಾತನು ಸದರಿ ಪಾರ್ಲರ್‌ನಲ್ಲಿ (ಸಲೂನ್) ಕೆಲಸಗಾರನಾಗಿದ್ದ. ಸದರಿ ಮಹಿಳೆಗೆ ಸುಮಾರು 8-9 ತಿಂಗಳಿನಿಂದ ಪರಿಚಯವಾಗಿ, ಹೇರ್ ಟ್ರೀಟ್‌ಮೆಂಟ್ ಕೊಡುತ್ತ ಬಂದಿದ್ದ.

ಸದರಿ ಮಹಿಳೆ ತನ್ನ ಹೇರ್ ಟ್ರೀಟ್‌ಮೆಂಟ್‌ನ ಕೊನೆಯ ಸಿಟ್ಟಿಂಗ್‌ಗೆ ಹೋದಾಗ, ಸದರಿ ಆರೋಪಿ ಪಾರ್ಲರ್‌ನಲ್ಲಿ ಜನಸಂದಣಿ ಇರುವುದರಿಂದ, ಪಾರ್ಲರ್‌ನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಟ್ರೀಟ್‌ಮೆಂಟ್ ಶುರು ಮಾಡಿದ್ದ. ಸದರಿ ದಿನ ಆರೋಪಿ ಟ್ರೀಟ್‌ಮೆಂಟ್ ಕೊಡುವಾಗ ಆ ರೂಮಿನ ದೊಡ್ಡ ಲೈಟ್ ಆರಿಸಿ, ಚಿಕ್ಕ ಲೈಟ್‌ನ್ನು ಹಚ್ಚಿ, ರೂಮಿನ ಬಾಗಿಲ ಚಿಲಕ ಹಾಕಿದ್ದು, ಸದರಿ ಮಹಿಳೆ ಅದನ್ನು ಪ್ರಶ್ನಿಸಿದಾಗ ಟ್ರೀಟ್‌ಮೆಂಟ್‌ಗೆ ಬೇಕಾಗುತ್ತದೆ ಎಂದು ಹೇಳಿದ್ದ. ಸದರಿ ಮಹಿಳೆಗೆ ಆರೋಪಿಯ ಮೇಲೆ ನಂಬಿಕೆ ಇದ್ದಿದ್ದರಿಂದ ಸುಮ್ಮನಾಗಿರುತ್ತಾಳೆ.

ಆರೋಪಿ ಹೇರ್ ಟ್ರೀಟ್‌ಮೆಂಟ್ ಕೊಡುತ್ತಾ ಆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ದೌರ್ಜನ್ಯ ಎಸಗಿರುತ್ತಾನೆ. ನಂತರ ನೊಂದ ಮಹಿಳೆ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಧಾರವಾಡ ವಿದ್ಯಾಗಿರಿ ಪೊಲೀಸರು ದೂರು ಸ್ವೀಕರಿಸಿ, ತನಿಖೆ ಮಾಡಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಧಾರವಾಡ 3ನೇ ಹೆಚ್ಚುವರಿ ಸಿ.ಜೆ.ಎಮ್ ನ್ಯಾಯಾಲಯದ ನ್ಯಾಯಾಧೀಶರಾದ ಅಲ್ಲಪ್ಪ ಎಮ್.ಬಡಿಗೇರ, ಇವರು ಸಾಕ್ಷಿ ವಿಚಾರಣೆ ಮಾಡಿ, ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ, ಆತನಿಗೆ 15 ತಿಂಗಳು ಸಾದಾ ಜೈಲು ಶಿಕ್ಷೆ ಮತ್ತು ರೂ. 5,000ಗಳ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.

ವಿದ್ಯಾಗಿರಿ ಪೊಲೀಸ್ ಠಾಣೇಯ ಅಂದಿನ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಆಗಿದ್ದ ರಾಜೇಸಾಬ ಎಸ್.ಕೆರೂರ್ ತನಿಖೆ ಮಾಡಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ವಕೀಲರಾದ (ಸೀನಿಯರ್ ಎ.ಪಿ.ಪಿ) ಅನಿಲಕುಮಾರ. ರಮೇಶಚಂದ್ರ ತೊರವಿ ಸರಕಾರದ ಪರವಾಗಿ ವಕಾಲತ್ತು ಮಂಡಿಸಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!