ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಡಾ. ಜಾಕೀರ ಹುಸೇನ ಕಾಲೋನಿಯ ಮುಸ್ಲಿಂ ಜಮಾತ ವತಿಯಿಂದ ಬಡ ವಿದ್ಯಾರ್ಥಿನಿಯ ಶಾಲೆಯ ವಾರ್ಷಿಕ ಕಲಿಕಾ ಶುಲ್ಕ ನೀಡಿ ಸಹಾಯ ಮಾಡಿದರು.
ಗದಗ ಶಹರದ ಆರ್ಯಭಟ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಮನ್ ಇಸ್ಮಾಯಿಲ್‌ಸಾಬ ದಂಡಿನ ಇವಳ ವಾರ್ಷಿಕ ಕಲಿಕಾ ಶುಲ್ಕ 15 ಸಾವಿರ ರೂಪಾಯಿಗಳನ್ನು ನೀಡಿದರು.
ಡಾ. ಜಾಕೀರ ಹುಸೇನ ಕಾಲೋನಿ ಮುಸ್ಲಿಂ ಜಮಾತಿನ ಅಧ್ಯಕ್ಷ ಎಸ್.ಎ. ಟೋಪಿವಾಲೆ, ಸದಸ್ಯರಾದ ಎಂ.ಸಿ. ಶೇಖ್, ಎಂ.ಎಲ್. ಗುಳೇದಗುಡ್ಡ, ಶಬ್ಬೀರ್ ಶಿರಹಟ್ಟಿ ಕಾಲೇಜಿಗೆ ಭೇಟಿ ನೀಡಿ ಪ್ರಾಚಾರ್ಯರ ಸಮ್ಮುಖದಲ್ಲಿ ವಿದ್ಯಾರ್ಥಿನಿಯ ಕಲಿಕಾ ಶುಲ್ಕದ ಚೆಕ್‌ನ್ನು ನೀಡಿದರು.



