ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಬಿಂಕದಕಟ್ಟಿಯ ಶ್ರೀರಾಮ ಕರುಣಾನಂದ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಶ್ರೀ ಭಗವಾನ್ ಸತ್ಯಸಾಯಿಬಾಬಾ ಸೇವಾ ಸಮಿತಿ, ಗದಗ ಇವರು ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದರು. ಸಮಿತಿಯು ಈ ಶಾಲೆಯಲ್ಲಿ ಪ್ರತೀ ವಾರಕ್ಕೊಮ್ಮೆ ಮೌಲ್ಯ ಶಿಕ್ಷಣ (ಬಾಲವಿಕಾಸ )ತರಗತಿಗಳನ್ನು ನಡೆಸುತ್ತಿದೆ.
ಸತ್ಯಸಾಯಿಬಾಬಾ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಭೋಜರಾಜ್ ಕಬಾಡಿ, ಶ್ರೀರಾಮ ಕರುಣಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ಎಂ.ಮೂಲಿಮನಿ ನೀರಿನ ಘಟಕವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಮರ್ ವೋರಾ, ಯಶೋಧರಗೌಡ ಜಿ.ಪಾಟೀಲ್, ಸಂಸ್ಥೆಯ ಅಧ್ಯಕ್ಷರಾದ ವಿ.ಡಿ. ರಂಗಪ್ಪನವರ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕೆ.ಆರ್. ಕಾರ್ಯಕ್ರಮ ಆಯೋಜಿಸಿದ್ದರು.



