ಶೆಫಾಲಿ ಸತ್ತಿದ್ದು ಹೃದಯಾಘಾತದಿಂದ ಅಲ್ಲ: ಶಾಕಿಂಗ್ ಹೇಳಿಕೆ ನೀಡಿದ ಪೊಲೀಸರು

0
Spread the love

ಪುನೀತ್ ರಾಜ್​ಕುಮಾರ್ ನಟನೆಯಹುಡುಗರು ಸಿನಿಮಾದಲ್ಲಿ ನಾ ಬೋರ್ಡು ಇರದ ಬಸ್ಸನು ಹಾಡಿಗೆ ಕುಣಿದಿದ್ದ ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್​ ಶೆಫಾಲಿ ಜರಿವಾಲಾ ತಡರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಶೆಫಾಲಿ ಸಾವು ಪ್ರತಿಯೊಬ್ಬರಿಗೂ ಶಾಕ್‌ ನೀಡಿದ್ದು ಈ ಮಧ್ಯೆ ನಟಿಯ ಸಾವಿನ ಕುರಿತಾಗಿ ಶಾಕಿಂಗ್‌ ಸುದ್ದಿಯೊಂದು ಸಿಕ್ಕಿದೆ.

Advertisement

ಆರಂಭದಲ್ಲಿ ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಸದ್ಯ ಪೊಲೀಸರು ನಟಿಯ ನಿಧನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಹಾರ್ಟ್‌ ಅಟ್ಯಾಕ್‌ ನಿಂದ ಶೆಫಾಲಿ ನಿಧನ ಹೊಂದಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಶೆಫಾಲಿ ಜರಿವಾಲಾ ಮುಂಬೈನ ಅಂಧೇರಿ ಲೋಖಂಡ್‌ವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದು, ಜೂನ್ 27ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾಗಿದ್ದಾರೆ. ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಅಷ್ಟರಲ್ಲಾಗಲೇ ಅವರು ನಿಧನ ಹೊಂದಿದ್ದಾರೆ. ಆರಂಭದಲ್ಲಿ ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು, ಆದ್ರೆ ಇದೀಗ ಪೊಲೀಸರ ಹೇಳಿಕೆ ಸಾಕಷ್ಟು ಅನುಮಾನ ಸೃಷ್ಟಿಸಿದೆ.

1982ರ ಡಿಸೆಂಬರ್ 15ರಂದು ಮುಂಬೈನಲ್ಲಿ ಹುಟ್ಟಿ ಬೆಳೆದ ಶೆಫಾಲಿ ಜನಿಸಿದ್ದು 2004ರಲ್ಲಿ ಅವರು ಹರ್ಮೀತ್ ಸಿಂಗ್​ ಎಂಬುವವರನ್ನು ವಿವಾಹ ಆದರು. ಈ ಸಂಬಂಧ 2009ರವರೆಗೆ ಇತ್ತು. ಆ ಬಳಿಕ ಇಬ್ಬರು ವಿಚ್ಛೇದನ ಪಡೆದರು. 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ವಿವಾಹವಾಗಿದ್ದರು.


Spread the love

LEAVE A REPLY

Please enter your comment!
Please enter your name here