Home Gadag News ಜೂನ್ 29ರಂದು ಉಪನ್ಯಾಸ ಕಾರ್ಯಕ್ರಮ

ಜೂನ್ 29ರಂದು ಉಪನ್ಯಾಸ ಕಾರ್ಯಕ್ರಮ

0
ಜೂನ್ 29ರಂದು ಉಪನ್ಯಾಸ ಕಾರ್ಯಕ್ರಮ
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಜೂನ್ 29ರ ಬೆಳಿಗ್ಗೆ 10ಕ್ಕೆ ನಡೆಯಲಿರುವ ಬಸವದಳದ 1652ನೇ ಶರಣ ಸಂಗಮದಲ್ಲಿ ವಚನ ಸಂಶೋಧನೆಯ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ 61ನೇ ಸ್ಮರಣೆ ಹಾಗೂ ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳವರ 30ನೇ ಸ್ಮರಣೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಅಧ್ಯತೆಯನ್ನು ಬಸವದಳದ ಅಧ್ಯಕ್ಷ ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಶರಣ ಎನ್.ಎಚ್. ಹಿರೇಸಕ್ಕರಗೌಡ್ರ ಡಾ. ಫ.ಗು. ಹಳಕಟ್ಟಿಯವರ ಕುರಿತು ಹಾಗೂ ಶರಣೆ ಗಂಗಮ್ಮ ಹೂಗಾರ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳವರ ಕುರಿತು ಉಪನ್ಯಾಸ ಮಾಡುವರು.

ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here