ಬಾಲಿವುಡ್ ಖ್ಯಾತ ನಟಿ ಶೆಫಾಲಿ ಜರಿವಾಲ ಕೇವಲ 42ನೇ ವಯಸ್ಸಿಗೆ ಕೊನೆಯುಸಿರು ಎಳೆದಿದ್ದಾರೆ. ನಟಿಯ ಸಾವಿಗೆ ಇದುವರೆಗೂ ಯಾವುದೇ ಅಸಲಿ ಕಾರಣ ಬಹಿರಂಗವಾಗಿಲ್ಲ. ಮೊದಲಿಗೆ ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇನ್ನೂ ಕೆಲವರು ವಯಸ್ಸಾಗದಂತೆ ನೋಡಿಕೊಳ್ಳಲು ಆಕೆಯ ಇಂಜೆಕ್ಷನ್ ಪಡೆದುಕೊಳ್ಳುತ್ತಿದ್ದರು. ಅದರ ಎಫೆಕ್ಟ್ ನಿಂದ ಹೀಗಾಯಿತು ಎಂದು ಹೇಳುತ್ತಿದ್ದಾರೆ. ಇದೀಗ ವೈದ್ಯರು ನಟಿಯ ಸಾವಿಗೆ ಟ್ವೀಸ್ಟ್ ನೀಡಿದ್ದಾರೆ.
ಶೆಫಾಲಿ ಜರಿವಾಲ ತಮ್ಮ ಆರೋಗ್ಯ ಹಾಗೂ ಸೌಂದರ್ಯದ ಬಗ್ಗೆ ಅತಿ ಹೆಚ್ಚು ಖಳಜಿ ವಹಿಸುತ್ತಿದ್ದರು ಎನ್ನಲಾಗಿದೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ನಟಿ ಆಂಟಿ ಏಜಿಂಗ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ನಿಯಮಿತ ವ್ಯಾಯಾಮ ಹಾಗೂ ಡಯಟ್ ಕೂಡ ಮಾಡುತ್ತಿದ್ದರಂತೆ. ಅಂದ ಹಾಗೆ ನಟಿ ಏಕಾಏಕಿ ಬಿಪಿ ಲೋ ಆಗಿದ್ದರಿಂದ ನಿಧನ ಹೊಂದಿದರು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಶೆಫಾಲಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರು. ಇದಕ್ಕಾಗಿ ನಟಿ ಉಪವಾಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 27 ತಡರಾತ್ರಿ ಶೆಫಾಲಿ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಈ ವೇಳೆ ತಕ್ಷಣವೇ ಆಕೆಯ ಪತಿ ಪರಾಗ್ ತ್ಯಾಗಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಆಸ್ಪತ್ರೆಗೆ ಬರೋ ಮೊದಲೆಯೇ ನಟಿ ನಿಧನ ಹೊಂದಿದ್ದಾಗಿ ವೈದ್ಯರು ಘೋಷಿಸಿದರು. ಆ ಬಳಿಕ ಅವರ ಶವವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಪೊಲೀಸರು ನಟಿಯ ಪತಿ ಮತ್ತು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅವರ ಮನೆ ಪರಿಶೀಲಿಸುವಾಗ ವಯಸ್ಸಾಗದಂತೆ ತಡೆಯಲು ಬಳಕೆ ಮಾಡುವ ಮಾತ್ರೆ, ಚರ್ಮಕ್ಕೆ ಹೊಳಪು ಕೊಡೋ ಮಾತ್ರೆಗಳು, ವಿಟಮಿನ್ ಮಾತ್ರೆಗಳನ್ನು ಸಿಕ್ಕಿವೆ. ಶೆಫಾಲಿ ಅವರು ವೈದ್ಯರ ಸಂಪರ್ಕಿಸದೆ ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಕುಟುಂಬ ತಿಳಿಸಿದೆ. ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಕಾರಣಕ್ಕೆ ಅವರಿಗೆ ಈವರೆಗೆ ಯಾವುದೇ ತೊಂದರೆ ಆಗಿರಲಿಲ್ಲವಂತೆ. ಆದರೆ ಲೋ ಬಿಪಿ ಸಮಸ್ಯೆಯಿಂದ ನಟಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಶಂಕಿಸಿದ್ದಾರೆ.