ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರನ್ಯಾ ರಾವ್ ಖಿನ್ನತೆ ಒಳಗಾಗಿದ್ದಾರಂತೆ. ಹಿರಿಯ ಅಧಿಕಾರಿಗಳ ಮಗಳಾಗಿದ್ರು ನಟಿ ನೆಮ್ಮದಿ ಇಲ್ಲದೆ ಕೊರಗುವಂತಾಗಿದೆ. ನಟಿಗೆ ಸಹ ಕೈದಿಗಳು ಟಾರ್ಚರು ನೀಡುತ್ತಿದ್ದಾರೆ ಎಂದು ನಟಿ ಜೈಲು ಸಿಬ್ಬಂದಿ ಬಳಿ ಅಳಲು ತೋಡಿಕೊಂಡಿದ್ದಾರಂತೆ
ಜೈಲಿನಲ್ಲಿರುವ ಇತರೆ ಮಹಿಳಾ ಕೈದಿಗಳು ರನ್ಯಾ ರಾವ್‌ಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ನಟಿ ಮಾಡಿದ್ದಾರೆ. ರನ್ಯಾರಾವ್‌ಗೆ ಚಿನ್ನ ಕಳ್ಳಿ ಅಂತೆಲ್ಲ ಅವಮಾನ ಮಾಡುತ್ತಿದ್ದು, ಜೈಲು ಹೇಗಿದೆ ಎಂದು ಚುಚ್ಚಿ ಮಾತನಾಡುತ್ತಿದ್ದಾರಂತೆ. ಹಾಗಾಗಿ ದಯವಿಟ್ಟು ನನ್ನನ್ನು ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಿ ಎಂದು ಜೈಲಿನ ಅಧಿಕಾರಿಗಳ ಬಳಿ ನಟಿ ಮನವಿ ಮಾಡಿಕೊಂಡಿದ್ದಾರೆ. ರನ್ಯಾ ಮನವಿಗೆ ಸ್ಪಂದಿಸಿರುವ ಅಧಿಕಾರಿಗಳು ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ದುಬೈನಿಂದ ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ನಟಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ಸಿಕ್ಕರೂ ರನ್ಯಾಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ರನ್ಯಾ ರಾವ್ ಮತ್ತು ಅವರ ಇಬ್ಬರು ಸಹಚರರಾದ ತರುಣ್, ಸಾಹಿಲ್ ಅವರನ್ನು ಕಠಿಣ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಿರುವುದರಿಂದ ನಟಿಯನ್ನು ಜೈಲಿನಿಂದ ರಿಲೀಸ್ ಮಾಡಿರಲಿಲ್ಲ. ಹಾಗಾಗಿ ನಟಿ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ.
ಸದ್ಯ ಖಿನ್ನತೆಯಿಂದ ಹೊರ ಬರಲು ರನ್ಯಾ ರಾವ್ ಪುಸ್ತಕಗಳ ಮೊರೆ ಹೋಗಿದ್ದಾರೆ. ಜೈಲಿನ ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಳ ಮಾಡಿಕೊಂಡು, ಪುಸ್ತಕ ಓದುವ ಮೂಲಕ ಕಾಲ ಕಳೆಯುತ್ತಿದ್ದಾರಂತೆ.