ಸಂಸ್ಕೃತ ಸಂಭಾಷಣಾ ಶಿಬಿರ ಮುಕ್ತಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಂಸ್ಕೃತ ಭಾರತೀ ಗದಗ ಜಿಲ್ಲೆ ಹಾಗೂ ಕಣವಿ ಗ್ರಾಮದ ಹನುಮಂತ ದೇವಸ್ಥಾನದ ಕಮಿಟಿಯ ಬಿ.ಜಿ. ಅಣ್ಣಿಗೇರಿ ಸಂಸ್ಕೃತ ಪಾಠಶಾಲೆಯ ಸಹಯೋಗದಲ್ಲಿ ತೇಜಸ್ವಿನಿ ಕುರ್ತಕೋಟಿ ಅವರು ನಡೆಸಿದ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರವು ಅಡ್ನೂರ ದಾಸೋಹ ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರೋಪಗೊಂಡಿತು.

Advertisement

ಸಂಸ್ಕೃತ ಭಾರತಿಯ ಗದಗ ಜಿಲ್ಲಾ ಸಂಯೋಜಕರು ಹಾಗೂ ಮುಖ್ಯಾಧ್ಯಾಪಕರಾದ ಎಸ್.ಎನ್. ಶಿಂಪಿಗೇರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಂಸ್ಕೃತ ಉಳಿಸಿ ಬೆಳೆಸುತ್ತಿರುವದು ಸಂತಸ ತಂದಿದೆ ಎಂದರಲ್ಲದೆ, ಪೂಜ್ಯ ಶ್ರೀಗಳು ಪೂರ್ವಾಶ್ರಮದಲ್ಲಿ ಸಂಸ್ಕೃತ ಕಲಿತಿದ್ದನ್ನು ಸ್ಮರಿಸಿದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಬಸವರಾಜ ಬಂದಕ್ಕನವರ, ತಾ.ಪಂ ಮಾಜಿ ಅಧ್ಯಕ್ಷ ಎಸ್.ಎಸ್. ಪಾಟೀಲ, ಟ್ರಸ್ಟ್ ಉಪಾಧ್ಯಕ್ಷ ಮಹಾದೇವಪ್ಪ ಬಂದಕ್ಕನವರ, ಕಾರ್ಯದರ್ಶಿ ಕಳಕಪ್ಪ ಕುರ್ತಕೋಟಿ, ಅರುಣ್ ಕಲ್ಲನಗೌಡ್ರು, ಕಲ್ಲಯ್ಯ ಮರೆಣ್ಣವರ, ಆನಂದ ಸ್ವಾಮಿ, ಪರಪ್ಪ ಕೋಳಿವಾಡ, ವಿ.ಟಿ. ಕುರ್ತಕೋಟಿ, ರೇವಣಸಿದ್ದನಗೌಡ ದೊಡ್ಡಗೌಡ್ರ, ಸಂಸ್ಕೃತ ಭಾರತೀ ಗದಗ ನಗರ ಸಂಯೋಜಕ ಮೌನೇಶ್ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here