ಗ್ರಾಮದ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಸೌಹಾರ್ದತೆಯ ತವರೂರಾದ ಮಾರನಬಸರಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Advertisement

ಮಾರನಬಸರಿ ಗ್ರಾಮದಲ್ಲಿ ನಿರ್ಮಾಣಗೊಂಡ 20 ಲಕ್ಷ ರೂ ವೆಚ್ಚದ ಸಾರ್ವಜನಿಕ ಗ್ರಂಥಾಲಯದ ಉದ್ಘಾಟನೆ ಹಾಗೂ 70 ಲಕ್ಷ ರೂ ವೆಚ್ಚದ ಸಿ.ಸಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಮಾರನಬಸರಿ ಗ್ರಾಮ ರಾಜಕೀಯವಾಗಿ ನನಗೆ ಶಕ್ತಿ ತುಂಬಿದ ಗ್ರಾಮವಾಗಿದೆ. ಈ ಗ್ರಾಮದ ಸರ್ವ ಜನಾಂಗದವರು ನನಗೆ ಪ್ರೀತಿ-ವಿಶ್ವಾಸವನ್ನು ತೋರಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಹೀಗಾಗಿ, ಗ್ರಾಮದ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದೆ. ಈ ಹಿಂದೆ ನಾನು ಶಾಸಕನಾಗಿದ್ದಾಗ ಹಲವಾರು ಅಬಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಇದಕ್ಕೆ ಸಾಕ್ಷಿ ಎಂದರು.

ಗ್ರಾಮದ ಪ್ರೌಢಶಾಲೆ ನಿರ್ಮಾಣಕ್ಕೆ ಅಗತ್ಯ ನೆರವು ನಿಡಲಾಗಿದೆ. ಶಾದಿ ಮಹಲ್, ರೇವಣಸಿದ್ದೇಶ್ವರ ಸಮುದಾಯ ಭವನ, ಯಾತ್ರಿ ನಿವಾಸ ಸೇರಿದಂತೆ ನರೆಗಲ್ಲ ಪಟ್ಟಣದಿಂದ ಕಳಕಾಪೂರ ರಸ್ತೆ, ಜಕ್ಕಲಿ ಗ್ರಾಮದಿಂದ ಕೊಪ್ಪದ ಕ್ರಾಸ್ ರಸ್ತೆಗಳನ್ನು ನಿರ್ಮಿಸುವ ಜೊತೆಗೆ ಗ್ರಾಮದ ಸಿಸಿ ರಸ್ತೆಗಳನ್ನು ನಿರ್ಮಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗಿದೆ. ಈಗ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯ ಹಳ್ಳದಿಂದ ರಾಯಣ್ಣ ವೃತ್ತದವರೆಗೆ ಸಿ.ಸಿ ರಸ್ತೆ ನಿರ್ಮಿಸಲು ಕ್ರಿಯಾಯೋಜನೆ ಸಲ್ಲಿಸಲಾಗಿದ್ದು, ಶೀಘ್ರವೇ ಭೂಮಿಪೂಜೆಯನ್ನು ನೆರವೇರಿಸಲಾಗುವುದು ಎಂದರು.

ಗ್ರಾ.ಪಂ ಅಧ್ಯಕ್ಷ ವೀರಣ್ಣ ಮರಡಿ ಅಧ್ಯಕ್ಷತೆ ವಹಿಸಿದ್ದರು.

ವೇ.ಮೂ. ವಿಶ್ವನಾಥ ಭಟ್ಟ ವೈದ್ಯ, ಶರಣಪ್ಪ ಕುರಿ, ಶಿವಪ್ಪ ಜಾಲಿಹಾಳ, ಜಿ.ಪಂ ಮಾಜಿ ಉಪಾಧ್ಯಕ್ಷ ಎಸ್.ಎಚ್. ಹಾದಿಮನಿ, ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಸಂಜಯ ದೊಡ್ಡಮನಿ, ಗ್ರಾ.ಪಂ ಉಪಾಧ್ಯಕ್ಷೆ ಮಂಜುಳಾ ಮಾದರ, ತಾ.ಪಂ ಇಒ ಮಂಜುಳಾ ಹಕಾರಿ, ಈರಪ್ಪ ನಿಡಗುಂದಿ, ಶಿವಕುಮಾರ ದಿಂಡೂರ, ಅಲ್ಲಾಸಾಬ ಮೋತೆಖಾನ, ಶಂಕ್ರಪ್ಪ ಸರ್ವಿ, ಅಡಿವೆಪ್ಪ ಜಿಗಳೂರ, ಖಾಧಿರಸಾಬ ಕಳಕಾಪೂರ, ದಿಲ್‌ಶ್ಯಾದಬೇಗಂ ದೋಟಿಹಾಳ, ಹನಮವ್ವ ತಳವಾರ, ಮಹ್ಮದ ಸವಡಿ, ರಿಯಾಜ ಆಲೂರ, ಡಿ.ಡಿ. ದೋಟಿಹಾಳ, ಈರಣ್ಣ ಸಾಖಾ, ಫಕ್ಕೀರಪ್ಪ ಕುಕನೂರ ಸೇರಿದಂತೆ ಮುಖಂಡರು, ಅಭಿಯಂತರರು, ಪಿಡಿಒ ಉಪಸ್ಥಿತರಿದ್ದರು.

ಗ್ರಾಮದ ಸಿದ್ದನಕೊಳ್ಳದ ಶ್ರೀಮಠ ಅಭಿವೃದ್ಧಿಗಾಗಿ 10 ಲಕ್ಷ ರೂ ಮತ್ತು ಗ್ರಾಮದೇವತೆ ಸಮುದಾಯ ಭವನ ನಿರ್ಮಾಣಕ್ಕೆ 3 ಲಕ್ಷ ರೂಗಳ ಅನುದಾನವನ್ನು ಒದಗಿಸಲಾಗಿದೆ. ಗ್ರಾಮದ ಕೆರೆ ತುಂಬಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೃಷ್ಣಾ ನದಿ ನೀರು ಗ್ರಾಮಕ್ಕೆ ಹರಿದು ಬರಲಿದೆ. ಇದರಿಂದ ಅಂತರ್ಜಲ ಹೆಚ್ಚಾಗಿ ರೈತರಿಗೆ ಅನುಕೂಲವಾಗಿ, ಕುಡಿಯುವ ನೀರಿನ ಸಮಸ್ಯೆ ಕೂಡ ತಗ್ಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.


Spread the love

LEAVE A REPLY

Please enter your comment!
Please enter your name here