ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ವಿದ್ಯುತ್ ಬಗ್ಗೆ ಸಾರ್ವಜನಿಕರು ವಹಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಹರಪನಹಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಸ್ಕಾಂ ವತಿಯಿಂದ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರು ತಮ್ಮ ನಿವಾಸ ಅಥವಾ ಇತರೆ ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸದೆ ಸೂಕ್ತ ಅಂತರವಿರಬೇಕು ಹಾಗೂ ಮಳೆಗಾಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟದೆ ತಕ್ಷಣವೇ ಬೆವಿಕಾಂ ಸಹಾಯವಾಣಿ-1912ಕ್ಕೆ ಕರೆ ಮಾಡಬೇಕು ಎಂದು ಸೂಚಿಸಲಾಯಿತು.
ವಿದ್ಯುತ್ ಕಂಬಗಳಿಗೆ ಬಟ್ಟೆಗಳನ್ನು ಒಣಗಿಸಲು ವಿದ್ಯುತ್ ತಂತಿಗಳನ್ನು ಕಟ್ಟಬಾರದು. ವಿದ್ಯುತ್ ತಂತಿ ಹಾದು ಹೋದ ಜಾಗದಲ್ಲಿ ಮರದ ರೆಂಬೆ-ಕೊಂಬೆಗಳನ್ನು ನೇರವಾಗಿ ಕಡಿಯದೆ ಬೆವಿಕಾಂ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬಾರದು ಹಾಗೂ ಬೆವಿಕಾಂ ಲೈನ್‌ನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆಯದಿರಲು ಸೂಚಿಸಲಾಯಿತು.
ಈ ವೇಳೆ ಎಇಇ ಪ್ರಕಾಶ್ ಪತ್ತೆನೂರು, ಜೆಇ ಕೆ.ಎಂ. ಬಸವರಾಜ್, ಸಿಬ್ಬಂದಿಗಳಾದ ಪೋರಪ್ಪ, ಕರಿಬಸಪ್ಪ, ಎಲ್.ಎಸ್. ಮಣಿನಾಯ್ಕ, ಎನ್. ತಿಪ್ಪಯ್ಯ ಸ್ವಾಮಿ ಬಾಗಳಿ, ಎಂ. ಈರಣ್ಣ, ಕೆ. ಬಾಬು, ಎಂ. ಕೊಟ್ರಪ್ಪ, ಶರಣಬಸವ, ಪಾಂಡ್ಯಾನಾಯ್ಕ, ಅನಿತಾ, ಎಸ್.ಕೆ. ಜ್ಯೋತಿ, ವಿ. ವೀರೇಶ, ಟಿ. ಕಿರಣ್, ಹೆಚ್. ರಾಮಚಂದ್ರ ಮುಂತಾದವರಿದ್ದರು.