ಕಂಠೀರವ ಸ್ಟೇಡಿಯಂನಲ್ಲಿ ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ!

0
Spread the love

ಬೆಂಗಳೂರು:- ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ ಆಗಿರುವ ಘಟನೆ ಜರುಗಿದೆ. ಡಿಮನ್ ರಾಜ್ ನಾಪತ್ತೆಯಾದ ವಿದ್ಯಾರ್ಥಿ.

Advertisement

7ನೇ ತರಗತಿ ಓದುತ್ತಿದ್ದ ಡಿಮನ್ ರಾಜ್ ಎಂದಿನಂತೆ ಬೆಳಗ್ಗೆ ಮನೆಯಿಂದ ಟ್ಯೂಷನ್‌ಗೆ ಹೋಗಿದ್ದ. ಆದರೆ ಟ್ಯೂಷನ್‌ಗೆ ಹೋಗದೇ ಕಂಠೀರವ ಸ್ಟೇಡಿಯಂಗೆ ಬಂದಿದ್ದ. ಕಂಠೀರವ ಸ್ಟೇಡಿಯಂನಲ್ಲಿ ಜಾವೆಲಿನ್ ಥ್ರೋ ಪ್ರಾಕ್ಟಿಸ್ ನೋಡಲು ಬಂದಿದ್ದ ಡಿಮನ್ ರಾಜ್ ಸ್ಟೇಡಿಯಂನಲ್ಲಿ ನೀರಜ್ ಚೋಪ್ರಾ ಜೊತೆ ಪೋಟೋ ತೆಗೆಸಿಕೊಂಡಿದ್ದ. ಬಳಿಕ ಅಲ್ಲಿದ್ದ ವ್ಯಕ್ತಿಯೊಬ್ಬರ ಮೂಲಕ ಪೋಟೋವನ್ನ ತನ್ನ ತಾಯಿಗೆ ಕಳುಹಿಸಿದ್ದ. ಅನಂತರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ.

ವಿದ್ಯಾರ್ಥಿ ನಾಪತ್ತೆ ಬಗ್ಗೆ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಪೋಷಕರು ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here