ಶೀಘ್ರದಲ್ಲೇ ಡಿಸಿಎಂ ಡಿಕೆಶಿ ಸಿಎಂ ಆಗ್ತಾರೆ: ಹೊಸ ಬಾಂಬ್ ಸಿಡಿಸಿದ ರಾಮನಗರ ಶಾಸಕ!

0
Spread the love

ರಾಮನಗರ:- ಶೀಘ್ರದಲ್ಲೇ ಡಿಸಿಎಂ ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳುವ ಮೂಲಕ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ, ಶೀಘ್ರದಲ್ಲೇ ಡಿಸಿಎಂ ಡಿಕೆಶಿ ಸಿಎಂ ಆಗ್ತಾರೆ. ಡಿಸಿಎಂ ಡಿಕೆಶಿಗೂ ಒಂದು ಬಾರಿ ಅವಕಾಶ ಸಿಗಬೇಕು. ಸಾಕಷ್ಟು ಕಷ್ಟಪಟ್ಟು ಪಕ್ಷ ಸಂಘಟನೆ ಮಾಡಿ ಸರ್ಕಾರ ತಂದಿದ್ದಾರೆ. ಕಷ್ಟಕಾಲದಲ್ಲಿದ್ದ ಪಕ್ಷಕ್ಕೆ ಶಕ್ತಿತುಂಬಿ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿ ಅವರ ಪರವಾಗಿ ಸಾಕಷ್ಟು ಶಾಸಕರು ಧ್ವನಿಗೂಡಿಸ್ತಾರೆ. ಈ ವಿಚಾರವನ್ನ ಸುರ್ಜೇವಾಲ ಅವರ ಮುಂದೆ ಇಡುತ್ತೇವೆ. ಈ ವಿಚಾರ ಚರ್ಚೆ ಮಾಡಲ್ಲ ಎಂದ ಮೇಲೆ ಅಲ್ಲಿಗೆ ಯಾಕೆ ಹೋಗಬೇಕು? ಎಂದು ವಾಗ್ದಾಳಿ ನಡೆಸಿದರು.

ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ ಮೇಲೆ ಪ್ರಬಲವಾಗಿ ಈ ವಿಚಾರವನ್ನೂ ಚರ್ಚೆ ಮಾಡ್ತೇನೆ. ಇದೇನು ಬಸ್ಸಾ? ಈ ಟ್ರಿಪ್ ಬೇಡ, ನೆಕ್ಸ್ಟ್ ಟ್ರಿಪ್ ಮಾಡಿ ಅಂತ ಹೇಳೋಕಾಗುತ್ತಾ? ಈ ಟರ್ಮ್ ಅಲ್ಲದೇ ಇನ್ಯಾವ ಟರ್ಮ್ ಮಾಡಿ ಅನ್ನೋದಕ್ಕೆ ಆಗುತ್ತಾ? ಡಿಕೆಶಿ ಸಿಎಂ ಆಗುವ ಕಾಲ ಹತ್ತಿರ ಬಂದಿದೆ. ಕ್ರಾಂತಿ ಅಂತ ಹೇಳಿರುವವರೇ ಡೇಟ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here