ಲಕ್ಷ್ಮೇಶ್ವರ: ದೂದನಾನಾ ದರ್ಗಾದ ಮುಂದುವರೆದ ರಸ್ತೆ ಕಾಮಗಾರಿಯನ್ನು ತಾತ್ಕಾಲಿವಾಗಿ ನಿಲ್ಲಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಜೆಸಿಬಿ ಮೇಲೆ ಹತ್ತಿ ಪ್ರತಿಭಟಿಸಿದರು. ಇದೇ ರಸ್ತೆಯ ಕಾಮಗಾರಿ ತಿಂಗಳುಗಳಿಂದ ಅರ್ಧಕ್ಕೆ ನಿಂತು ಸಂಚಾರಕ್ಕೆ ಪರದಾಡುವಂತಾಗಿದೆ. ಈಗ ಮತ್ತೆ ಮುಂದುವರೆದ ಕಾಮಗಾರಿಗೆ ರಸ್ತೆ ಅಗೆಯುವುದು ಬೇಡ. ಮೊಹರಂ ಹಬ್ಬವೂ ಇದ್ದು, ರೈತರು, ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರು ಈಗಾಗಲೇ ಸುಸ್ತಾಗಿದ್ದಾರೆ. ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸಿ ಮುಂದುವರೆದ ಕಾಮಗಾರಿ ಪ್ರಾರಂಭಿಸಿ ಎಂದು ಆಗ್ರಹಿಸಿದರು. ಸಾರ್ವಜನಿಕರ ಒತ್ತಾಯಕ್ಕೆ ಕಾಮಗಾರಿಯನ್ನು ಅಲ್ಲಿಗೆ ಕೈಬಿಟ್ಟು ಕೆಲಸಗಾರರು ಅಲ್ಲಿಂದ ತರೆಳಿದರು.
Advertisement