ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ರಣತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲೆಗಳಿಗೆ ಅವಶ್ಯಕವಿರುವ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಚವ್ಹಾಣ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ದಾನಮ್ಮನವರ, ಸಂತೋಷ ಓಬಾಜಿ, ಬಿಇಓ ಎಚ್.ಎನ್. ನಾಯ್ಕ, ಬಿ.ಡಿ. ಪಲ್ಲೇದ, ಜಾನು ಲಮಾಣಿ, ಶಂಕರ ಮರಾಠೆ, ಅಶೋಕ ಬಳ್ಳಾರಿ, ಸುರೇಶ ಸಣ್ಣತಂಗಿ, ವಿಠೋಬ ಬಡಕಂಡಪ್ಪನವರ, ಫಕ್ಕೀರೇಶ ವಾರದ, ಧರ್ಮಣ್ಣ ಚವ್ಹಾಣ, ಬಸಪ್ಪ ಪ್ಯಾಟಿ, ಮಲ್ಲನಗೌಡ ಪಾಟೀಲ, ಗಂಗಾಧರ ಬಳಿಗಾರ, ಶಿವಯೋಗಪ್ಪ ನಿರ್ವಾಣಶೆಟ್ಟರ, ಹನುಮಂತಪ್ಪ ದೊಡ್ಡಮನಿ, ಹನುಮಂತಪ್ಪ ಸಂಗಮ್ಮನವರ, ಅರ್ಜುನಪ್ಪ ಸಂಗಮ್ಮನವರ, ಕುರುಗೋಡಪ್ಪ ಬಡಖಂಡಪ್ಪನವರ, ದೇವಪ್ಪ ಮಾಗಡಿ, ಅಜ್ಜಪ್ಪ ಛಬ್ಬಿ, ಪರಶುರಾಮ ವಡವಿ, ಮಲ್ಲಪ್ಪ ಪ್ಯಾಟಿ, ಭಾರ್ಗವ ಗದಗ, ಶ್ರೀಕಾಂತ ಕಮ್ಮಾರ, ದೇವು ಶಲವಡಿ, ಶಾಂತಮ್ಮ ತಳವಾರ, ಹನುಮಂತ ದಾಸರ, ರಾಜು ಪರಸಪ್ಪನವರ, ಲಕ್ಷ್ಮಣ ಮರಾಠೆ, ಪಿಡಿಓ ಅನಿತಾ ಮಾಢಳ್ಳಿ ಮುಂತಾದವರು ಉಪಸ್ಥಿತರಿದ್ದರು.