ಹಾಸನ; ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಮದುವೆಯಾದ ಆರು ತಿಂಗಳಲ್ಲೇ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ವಿದ್ಯಾ ಮೃತ ನವವಿವಾಹಿತೆ. ಸೋಮಲಾಪುರ ಗ್ರಾಮದ ಶಿವು ಎಂಬುವವರ ಜೊತೆ ವಿವಾಹವಾಗಿದ್ದರು. ಪತಿ ಶಿವು ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು,
ಇಬ್ಬರು ಬೆಂಗಳೂರಿನ ಶಂಕರಪುರಂನಲ್ಲಿ ವಾಸವಾಗಿದ್ದರು. ಜೂ.30ರಂದು ವಿದ್ಯಾ ಕಾಣೆಯಾಗಿದ್ದರು. ಈ ಕುರಿತು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಮಂಗಳವಾರ ಸಂಜೆ ಅರಸೀಕೆರೆ ರೈಲ್ವೆ ಟ್ರ‍್ಯಾಕ್ ಬಳಿ ವಿದ್ಯಾ ಶವವಾಗಿ ಪತ್ತೆಯಾಗಿದ್ದಾರೆ.
ಮದುವೆಯಾದ ಆರಂಭದಿಂದಲೂ ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಇದೀಗ ಮಗಳನ್ನು ಅವರೇ ಹತ್ಯೆ ಮಾಡಿದ್ದಾರೆ ಎಂದು ಮೃತ ವಿದ್ಯಾಳ ಕುಟುಂಬಸ್ಥರು ಆರೋಪಿಸಿದ್ದಾರೆ.