ಠೇವಣಿದಾರರ ಹಣವನ್ನು ಮರಳಿ ಕೊಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ 8 ವರ್ಷದ ಹಿಂದೆ ಪ್ರಾರಂಭವಾಗಿರುವ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಲಕ್ಷ್ಮೇಶ್ವರ ಶಾಖೆಯಲ್ಲಿ ಕೊಟ್ಯಾಂತರ ರೂಗಳ ಠೇವಣಿ ಹಣವನ್ನು ಠೇವಣಿದಾರರಿಗೆ ನೀಡದೆ ಸತಾಯಿಸುತ್ತಿದ್ದು, ಅದರ ಕೇಂದ್ರ ಕಚೇರಿಯ ಆಡಳಿತ ಮಂಡಳಿಯವರಿಗೆ ವಂಚನೆ ಆರೋಪದಡಿಯಲ್ಲಿ ತಕ್ಕ ಶಿಕ್ಷೆ ನೀಡಬೇಕು ಮತ್ತು ಠೇವಣಿದಾರರ ಹಣ ಮರಳಿ ದೊರೆಯುವಂತೆ ಮಾಡಬೇಕೆಂದು ಆಗ್ರಹಿಸಿ ಠೇವಣಿದಾರರು ಗೋಕಾಕದ ಜೈಹೋ ಜನತಾ ವೇದಿಕೆಯ ಸಹಯೋಗದಲ್ಲಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ, ಸಹಕಾರಿ ಸಚಿವ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವಾನಂದ ಹಿರೇಮಠ ಮತ್ತು ಸಾಮಾಜಿಕ ಹೋರಾಟಗಾರ ರವಿ ಹೊನ್ನಿಕೊಳ್ಳ ಮಾತನಾಡಿ, ಪಟ್ಟಣದಲ್ಲಿ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ ಅದರ ಮೂಲಕ ನೂರಾರು ಜನರಿಂದ ಠೇವಣಿ ಸಂಗ್ರಹಿಸಿ ಇದೀಗ ಜನರಿಗೆ ಹಣ ನೀಡದೇ ಸತಾಯಿಸುತ್ತಿದ್ದು, ಕೋಟ್ಯಾಂತರ ರೂ ಹಣವನ್ನು ವಂಚಿಸಿದ್ದಾರೆ. ಪಟ್ಟಣದ ಶಾಖೆಯಲ್ಲಿ ಸುಮಾರು 5.25 ಕೋಟಿಗೂ ಅಧಿಕ ಠೇವಣಿ ಹಣವಿದ್ದು, ಇದೀಗ ಹಣವನ್ನು ನೀಡದೆ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಕೂಡಲೇ ಠೇವಣಿದಾರರ ಹಣವನ್ನು ಮರಳಿ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ, ಈ ಕುರಿತಂತೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಠೇವಣಿದಾರರಾದ ಅಪ್ಪಣ್ಣ ಸೊರಟೂರ, ಸಚಿನ್ ಕರ್ಜೆಕಣ್ಣವರ, ದಿನೇಶ ಗಾಂಜಿ, ವಿ.ಸಿ. ರಬಕವಿ, ಎಸ್.ಎಸ್. ವಸ್ತçದ, ಮೃತ್ಯುಂಜಯ ಹಾವೇರಿಮಠ, ಮಹಾಂತೇಶ ಕರ್ಜೆಕಣ್ಣವರ, ಶ್ರೀಪಾಲ ಗಾಂಧಿ, ಎಸ್.ಎನ್. ಮಲ್ಲಾಡದ, ಈರಣ್ಣ ದವಡಿ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಮಧು ಗಾಂಧಿ, ಖುಷಿ ಗಾಂಧಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here