ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯ ಪ್ರಮುಖ ಪಾತ್ರಗಳು ಒಬ್ಬರ ಹಿಂದೊಬ್ಬರಂತೆ ಬದಲಾಗುತ್ತಿದ್ದಾರೆ. ಈ ಹಿಂದೆ ತನು ಪಾತ್ರಧಾರಿ ಬದಲಾಗಿದ್ದರು. ಆ ಬಳಿಕ ಕಳೆದ ಒಂದು ವಾರಗಳ ಹಿಂದಷ್ಟೇ ಕಥಾ ನಾಯಕಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಹೊರ ಬಂದರು. ಇದೀಗ ಸೀರಿಯಲ್ ಮತ್ತೊಂದು ಪ್ರಮುಖ ಪಾತ್ರಧಾರಿ ಲಕ್ಷ್ಮೀ ನಿವಾಸ ತಂಡಕ್ಕೆ ಗುಡ್ ಬೈ ಹೇಳಿದ್ದಾರೆ.
ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಶ್ವೇತಾ ವೈಯಕ್ತಿಕ ಕಾರಣದಿಂದ ಧಾರವಾಹಿ ತೊರೆದಿದ್ದಾರೆ. ಶ್ವೇತಾ ಜಾಗಕ್ಕೆ ನಟಿ ಮಾಧುರಿ ಎಂಟ್ರಿಕೊಟ್ಟಿದ್ದಾರೆ. ಇದೀಗ ಲಕ್ಷ್ಮೀ ಸೋದರನ ಪಾತ್ರದಲ್ಲಿ ನಟಿಸುತ್ತಿದ್ದ ನೀನಾಸಂ ಅಶ್ವಥ್ ಧಾರವಾಹಿ ತಂಡದಿಂದ ಹೊರ ಬಂದಿದ್ದಾರೆ.
ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ನರಸಿಂಹ ಪಾತ್ರದಲ್ಲಿ ನಟಿಸುತ್ತಿದ್ದ ನೀನಾಸಂ ಅಶ್ವಥ್ ಧಾರವಾಹಿಯಿಂದ ಹೊರ ಬಂದಿದ್ದಾರೆ. ನೀನಾಸಂ ಅಶ್ವಥ್ ಸೀರಿಯಲ್‌ನಿಂದ ಹೊರ ಬಂದಿರೋದು ಯಾಕೆ ಎಂಬುದು ತಿಳಿದು ಬಂದಿಲ್ಲ. ಸದ್ಯ ನರಸಿಂಹಕ್ಕೆ ಪಾತ್ರಕ್ಕೆ ಮತ್ತೋರ್ವ ಖ್ಯಾತ ಹಿರಿಯ ನಟ ಧರ್ಮೆಂದ್ರ ಎಂಟ್ರಿಕೊಟ್ಟಿದ್ದು ಸದ್ಯ ಆ ಪ್ರೋಮೋವನ್ನು ಝೀ ಕನ್ನಡ ವಾಹಿನಿ ಸೋಷಿಯಲ್ ಮೀಡಯಾದಲ್ಲಿ ಶೇರ್ ಮಾಡಿದೆ.