ದೆಹಲಿ;- ದೆಹಲಿಯ ಲಜ್‌ಪತ್ ನಗರದಲ್ಲಿ ಕೆಲಸದವನಿಂದಲೇ ತಾಯಿ ಹಾಗೂ ಮಗನ ಹತ್ಯೆಗೈದಿರುವ ಘಟನೆ ಜರುಗಿದೆ. 42 ವರ್ಷದ ತಾಯಿ ರುಚಿಕಾ, 14 ವರ್ಷದ ಕ್ರಿಶ್ ಕೊಲೆಯಾದವರು.
ಮುಖೇಶ್ (24) ಬಂಧಿತ ಆರೋಪಿ. ರುಚಿಕಾ ಹಾಗೂ ಆಕೆಯ ಪತಿ ಸೇರಿಕೊಂಡು ಬಟ್ಟೆ ಅಂಗಡಿಯೊAದನ್ನು ನಡೆಸುತ್ತಿದ್ದರು. ಇದೇ ಅಂಗಡಿಯಲ್ಲಿ ಆರೋಪಿ ಮುಖೇಶ್ ಚಾಲಕ ಹಾಗೂ ಸಹಾಯನಾಗಿ ಕೆಲಸ ಮಾಡುತ್ತಿದ್ದ. ಕೊಲೆ ನಡೆದ ದಿನ ಆರೋಪಿ ಮುಖೇಶ್ ಮನೆಗೆ ಬಂದಿದ್ದ. ಈ ವೇಳೆ ರುಚಿಕಾ ಆತನಿಗೆ ಬೈದಿದ್ದಳು ಎನ್ನಲಾಗಿದ್ದು, ಇದೇ ಕೋಪದಿಂದ ಆಕೆ ಹಾಗೂ ಮಗನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ರುಚಿಕಾ ಪತಿ ಕುಲದೀಪ್ ಮಾತನಾಡಿ, ನನ್ನ ಹೆಂಡತಿ ಹಾಗೂ ಮಗನಿಗೆ ನಿರಂತರವಾಗಿ ಕರೆ ಮಾಡಿದ್ದು, ಅವರು ಉತ್ತರಿಸಿರಲಿಲ್ಲ. ಅದೇ ಗಾಬರಿಯಿಂದ ಮನೆಯ ಬಳಿ ಬಂದಾಗ ಬಾಗಿಲು ಲಾಕ್ ಆಗಿತ್ತು ಹಾಗೂ ಮೆಟ್ಟಿಲು, ನೆಲದ ಮೇಲೆ ರಕ್ತದ ಕಲೆ ಇತ್ತು. ತಕ್ಷಣವೇ ನಾನು ಪೊಲೀಸರಿಗೆ ಕರೆ ಮಾಡಿದೆ ಎಂದು ತಿಳಿಸಿದ್ದಾರೆ.