ಮಂಡ್ಯ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್’ನಿಂದ ನಾನೇ ಅಭ್ಯರ್ಥಿಯಾಗಿರುತ್ತೇನೆ ಎಂದು ಶ್ರೀರಂಗಪಟ್ಟಣದ ಮಾಜಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಾನೇ ಅಭ್ಯರ್ಥಿಯಾಗಿರುತ್ತೇನೆ.
Advertisement
ನನ್ನ ಪಕ್ಷ ಜೆಡಿಎಸ್, ನನ್ನ ನಾಯಕ ಕುಮಾರಸ್ವಾಮಿ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಮೈತ್ರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಒಗ್ಗಟ್ಟಿನ ಕೊರತೆಯಿಂದ ಕಾಂಗ್ರೆಸ್ ಲಾಭ ಪಡೆಯಬಹುದು ಎಂಬ ಊಹಾಪೋಹಗಳು ಕೇಳಿಬಂದಿವೆ. ಮಂಡ್ಯದ ಜೆಡಿಎಸ್ ಕಾರ್ಯಕರ್ತರು ರವೀಂದ್ರ ಶ್ರೀಕಂಠಯ್ಯನವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.