ತಿಂಗಳಿಗೆ 4 ಲಕ್ಷ ರೂ ಜೀವನಾಂಶ ಕಡಿಮೆ ಆಯ್ತು: ಕೋರ್ಟ್ ತೀರ್ಪಿನ ಬಗ್ಗೆ ಶಮಿ ಮಾಜಿ ಪತ್ನಿ ಹೇಳಿದ್ದೇನು..?

0
Spread the love

ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮಾಜಿ ಪತ್ನಿ ಹಸೀನಾ ಜಹಾನ್ ಹಾಗೂ ಮಗಳಿಗೆ ಜೀವನಾಂಶ ನೀಡಲು ಕೋಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ. ಪತ್ನಿ, ಮಗಳಿಗೆ ಒಟ್ಟಾರೆ ತಿಂಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಈ ಮೊತ್ತವನ್ನು ಕಳೆದ 7 ವರ್ಷಗಳ ಹಿಂದಿನಿಂದ ಲೆಕ್ಕ ಹಾಕಿ ನೀಡಲು ಹೈಕೋರ್ಟ್ ಆದೇಶ ನೀಡಿದೆ.

Advertisement

ಇದರ ಬೆನ್ನಲ್ಲೆ ಈ ಹಣ ಖಂಡಿತ ಕಡಿಮೆಯಾಯಿತು ಎಂದು ವಿಚ್ಛೇದಿತ ಪತ್ನಿ ಹಸೀನ್ ಜಹಾನ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ದೊಡ್ಡ ಗೆಲುವಾಗಿದ್ದು ಬಹಳ ದಿನಗಳ ಹೋರಾಟದ ನಂತರ ತನಗೆ ನ್ಯಾಯ ಸಿಕ್ಕಿದೆ ಎಂದರು.

“ದೇವರು ನನಗೆ ಗೆಲುವು ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಬಹಳ ದಿನಗಳಿಂದ ನಾನು ಇದಕ್ಕಾಗಿ ಹೋರಾಡುತ್ತಿದ್ದೆ. ಈಗ ನಾನು ನನ್ನ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮತ್ತು ಆರಾಮವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ.

ಆದರೂ ಶಮಿ ಅವರ ಇಂದಿನ ಆದಾಯ ಮತ್ತು ಜೀವನಶೈಲಿಗೆ ಹೋಲಿಸಿದರೆ ಈ ಮೊತ್ತ ಏನೂ ಅಲ್ಲ. ನಾವು ಸುಮಾರು ಏಳು ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ 10 ಲಕ್ಷ ರೂಪಾಯಿ ಕೇಳಿದ್ದೆವು. ಅಂದಿನಿಂದ ಶಮಿ ಅವರ ಆದಾಯ ಮತ್ತು ಹಣದುಬ್ಬರ ಎರಡೂ ಹೆಚ್ಚಾಗಿದೆ” ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here