ಮೈಸೂರು: ದೇವಾಲಯದಲ್ಲಿ ಕಳ್ಳತನಕ್ಕೂ ಮುನ್ನ ದೇವರಿಗೆ ಕೈ ಮುಗಿದು ಹುಂಡಿ ಹಣವನ್ನು, ದೇವರ ಕಿರೀಟವನ್ನು ಕದ್ದ ಕಳ್ಳರ ಸುದ್ದಿಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು,
Advertisement
ಇಲ್ಲೊಬ್ಬ ಕಳ್ಳ ದೇವಾಲಯಕ್ಕೆ ಬಂದು ಅಮ್ಮಾ ನೀನೇ ನನ್ನನ್ನು ಕಾಪಾಡ್ಬೇಕು ಎಂದು ಭಕ್ತಿಯಿಂದ ಕೈ ಮುಗಿದು ದೇವಿಯ ತಾಳಿಯನ್ನೇ ಎಗರಿಸಿದ್ದಾನೆ.
ಹೌದು ಮೈಸೂರಿನ ಗಾಯತ್ರಿಪುರಂ ನಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಕೈಮುಗಿಯುವ ಸೋಗಿನಲ್ಲಿ ಬಂದು ಖದೀಮ ತಾಳಿ ಕಳ್ಳತನ ಮಾಡಿದ್ದಾನೆ. ತಾಳಿ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.