ಮಂಡ್ಯ: ಮಂಡ್ಯವನ್ನು ನಿಮಗೆ, ನಿಮ್ಮ ಕುಟುಂಬಕ್ಕೆ ಗುತ್ತಿಗೆ ಕೊಟ್ಟಿಲ್ಲ ಎಂದು ಮಂಡ್ಯದಲ್ಲಿ ನಿಖಿಲ್ ವಿರುದ್ದ ಶಾಸಕ ಗಣಿಗ ರವಿಕುಮಾರ್ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಅವರ ದೊಡ್ಡಪ್ಪ 1500 ಓಟ್ ನಲ್ಲಿ ಗೆದ್ದಿದ್ದು,
ನನಗೆ 62 ಸಾವಿರ ಜನ ಓಟ್ ಹಾಕಿದ್ದಾರೆ ಅವರಿಗೆ ನೀವು ಅವಮಾನ ಮಾಡ್ತಿದ್ದಿರಾ? ಪ್ರಜಾಪ್ರಭುತ್ವದಲ್ಲಿ ಪ್ರತಿಯೋಂದು ಓಟಿಗೆ ಬೆಲೆ ಇದೆ. ಸುಮ್ಮನೆ ಟೈಮ್ ಪಾಸ್ ಗಿರಾಕಿಗಳು ಟೂರ್ ಗೆ ಬಂದಿದ್ಯಾ 7 ದಿನ ಟೂರ್ ಹೊಡ್ಕೊಂಡು ಹೋಗು ಎಂದು ಏಕವಚನದಲ್ಲೇ ವಾಗ್ಧಾಳಿ ನಡೆಸಿದ್ದಾರೆ.
ಸುಮ್ಮನೆ ನೀವು ಅರ್ಚೋದು, ಕಿರಿಚೊದು, ಕೂಗೋದ್ರಿಂದ ಮಂಡ್ಯ ಅಭಿವೃದ್ಧಿ ಆಗಲ್ಲ, ಕೆಲಸ ಮಾಡಿ ಸ್ವಾಗತಿಸುತ್ತೇವೆ ಆದ್ರೆ ಕೆಲಸ ಮಾಡೋರನ್ನ ಟೀಕೆ ಮಾಡಿ ಮತದಾರರಿಗೆ ಅವಮಾನ ಮಾಡಬೇಡಿ ಎಂದರು. ಕುಮಾರಸ್ವಾಮಿಗೆ ರಾಜ್ಯ ಸರ್ಕಾರದ ಸಹಕಾರ ಇಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅತ್ರ ದುಡ್ಡು ಇಸ್ಕೊಳ್ಳಕ್ಕೆ ನಾವು ರೆಡಿ ಇದ್ದೇವೆ. ಅಭಿವೃದ್ಧಿ ಮಾಡ್ತೇವೆ. ಎಲೆಕ್ಷನ್ ಜನರಿಗೆ ಬಿಟ್ಟಿದ್ದು, ಅಭಿವೃದ್ಧಿಗೆ ಯಾರು ಬೇಕಾದರೂ ದುಡ್ಡು ಕೊಡಬಹುದು ಎಂದರು.