ಬೀದರ್: ಕಾಂಗ್ರೆಸ್‌ನಲ್ಲಿ ರಾಜಕೀಯ ಬೆಳವಣಿಗಳು ಆಗುತ್ತಿವೆ, ಕಾದು ನೋಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
Advertisement
ಈ ಸಂಬಂಧ ಮಾತನಾಡಿದ ಅವರು, ಸೆಪ್ಟೆಂಬರ್‌ಗೆ ಕ್ರಾಂತಿ ಆಗುತ್ತೆ, ಕ್ರಾಂತಿಯಾಗುತ್ತದೆ ಎನ್ನುತ್ತಿದ್ದಾರೆ. ಆದರೆ ಆ ಕ್ರಾಂತಿಯಾಗುತ್ತದೋ ಇಲ್ವೋ ಗೊತ್ತಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ರಾಜಕೀಯ ಬೆಳವಣಿಗಳು ಆಗುತ್ತಿವೆ. ಕಾದು ನೋಡೋಣ ಎಂದರು
ಸಿದ್ದರಾಮಯ್ಯನವರು ಐದು ವರ್ಷ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಆದರೆ ಒಂದAತು ಸತ್ಯ ಕಾಂಗ್ರೆಸ್‌ನಲ್ಲಿ ಹಲವು ಗುಂಪುಗಳಿದ್ದು, ಕೆಲವು ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ. ಕೆಲವು ಗುಂಪುಗಳು ನೇರವಾಗಿಯೇ ಗುಂಪುಗಾರಿಕೆ ಮಾಡುತ್ತಿದ್ದು, ಈ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಸರ್ಕಾರದ ಮೇಲೆ ರಾಜ್ಯದ ಜನರು ವಿಶ್ವಾಸ ಕಳೆದುಕೊಂಡು ಬಹಳ ದಿನವಾಗಿದ್ದು, ಸರ್ಕಾರ ಕಾಲಹರಣ ಮಾಡುತ್ತಿದೆ ಎಂದರು.