
ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಭಾರತಾಂಬೆಯ ಸೇವೆ ಮಾಡಲು ನಮ್ಮ ತನು, ಮನ, ಧನ ಅರ್ಪಿಸಿಕೊಳ್ಳುವುದು ಅವಶ್ಯಕವೆಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ಮಾಸುಮಲಿ ಮದಗಾರ ಹೇಳಿದರು.
Advertisement
ಸ್ಥಳೀಯ ಕಟ್ಟಿಬಸವೇಶ್ವರ ರಂಗಮಂದಿರ ನಿವಾಸಿ ಸಂಗಪ್ಪ ವಡಗೇರಿ ಇವರ ಮೊಮ್ಮಗ ಆಕಾಶ ಕವಡಿಮಟ್ಟಿ ಭಾರತೀಯ ಸೇನೆಗೆ ನೇಮಕಗೊಂಡಿರುವ ನಿಮಿತ್ತ ಅವರನ್ನು ಕುಟುಂಬ ಸಹಿತವಾಗಿ ಸನ್ಮಾನಿಸಿ ಮಾತನಾಡಿದರು.
ಭಾರತೀಯ ಸೇನೆಗೆ ಸೇರಲು ಅನೇಕ ಯುವಕರು ವರ್ಷಾನುಗಟ್ಟಲೆ ಸಾಕಷ್ಟು ಕಷ್ಟಪಡುತ್ತಾರೆ. ಭಾರತಾಂಬೆಯ ಸೇವೆ ಮಾಡಲು ಪೂರ್ವಜರ ಆಶಿರ್ವಾದ ಹಾಗೂ ಸ್ವಂತ ಶ್ರಮ ಅಗತ್ಯ. ಯುವಕರು ದೈಹಿಕವಾಗಿ, ಮಾನಸಿಕವಾಗಿ ಸದಾ ತಾಯ್ನಾಡಿನ ಸೇವೆ ಮಾಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಮಿಟಿಯ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಸೇರಿದಂತೆ ಮದಗಾರ ಕುಟುಂಬದ ಸದಸ್ಯರು ಇದ್ದರು.