ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ ವಂಚಕ ಸುಖೇಶ್ ಚಂದ್ರಶೇಖರ್ ಜೊತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಭಾಗಿಯಾಗಿದ್ದಾರೆ ಎಂಬ ಆರೋಪ ಈ ಮೊದಲಿನಿಂದಲೂ ಕೇಳಿ ಬಂದಿದೆ, ಹೀಗಾಗಿ ಇಡಿ ಅಧಿಕಾರಿಗಳು ನಟಿಯ ವಿರುದ್ಧ ದೂರು ದಾಖಲಿಸಿದ್ದರು. ಈ ದೂರನ್ನು ರದ್ದುಗೊಳಿಸಬೇಕು ಎಂದು ನಟಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ದೆಹಲಿ ಹೈಕೋರ್ಟ್ ನಟಿಯ ಅರ್ಜಿಯನ್ನ ವಜಾಗೊಳಿಸಿದೆ.
ಈ ಕೇಸ್ನಲ್ಲಿ ಸುಖೇಶ್ ಚಂದ್ರಶೇಖರ್ ತನ್ನನ್ನು ಸಿಲುಕಿಸಿದ್ದಾರೆ ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೈಕೋರ್ಟ್ನಲ್ಲಿ ವಾದಿಸಿದ್ದರು. ತಾನು ಯಾವುದೇ ಆಕ್ರಮ ಹಣ ವರ್ಗಾವಣೆ ಮಾಡಿಲ್ಲ. ಅಪರಾಧದ ಹಣವೂ ನನ್ನ ಬಳಿ ಇಲ್ಲ ಎಂದು ಹೈಕೋರ್ಟ್ನಲ್ಲಿ ಜಾಕ್ವೆಲಿನ್ ವಾದಮಂಡನೆ ಮಾಡಿದ್ದರು. ಸುಕೇಶ್ ಜೊತೆ ವಂಚನ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಇದ್ದಾರೆ ಎಂದು ಇಡಿ ಇಡಿ ಸೂಕ್ತ ಆಧಾರದ ಮೇಲೇನೆ ಜಾಕ್ವಲಿನ್ ವಿರುದ್ಧ ಕೇಸ್ ದಾಖಲಿಸಿತ್ತು.
ಆದರೆ, ಇದನ್ನ ಪ್ರಶ್ನಿಸಿ ಜಾಕ್ವೆಲಿನ್ ಫರ್ನಾಂಡಿಸ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮ ಮೇಲಿನ ಕೇಸ್ ಅನ್ನ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿದ್ದರು. ಆದರೆ ನಟಿ ಸಲ್ಲಿಸುರವ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು ಸದ್ಯಕ್ಕಂತು ನಟಿಗೆ ಈ ಕೇಸ್ ನಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಈ ಕೇಸ್ನಲ್ಲಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಪೂರಕ ಚಾರ್ಜ್ಶೀಟ್ ಕೂಡ ಕೆಳ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಈ ಹಂತದಲ್ಲಿ ಕೇಸ್ ರದ್ದತಿಯನ್ನು ಕೋರಿ ಜಾಕ್ವೆಲಿನ್ ಫರ್ನಾಂಡೀಸ್ ಸಲ್ಲಿಸಿರುವ ಈ ಅರ್ಜಿಯೇ ವಿಚಾರಣೆಗೆ ಯೋಗ್ಯವಲ್ಲ ಎಂದು ಇಡಿ ವಾದಿಸಿದೆ.