ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ; ನಿಖಿಲ್ ಕುಮಾರಸ್ವಾಮಿ ಭಾಗಿ

0
Spread the love

ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯ ಹೊರವಲಯದಲ್ಲಿರುವ (ಮೀನಕೇರಾ ಕ್ರಾಸ್) ವಿಜಯಲಕ್ಷ್ಮಿ ಫಂಕ್ಷನ್ ಹಾಲ್ ನಲ್ಲಿ ಗುರುವಾರ ನಡೆದ, ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ’ ಯಲ್ಲಿ ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.

Advertisement

ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಬೆಳಗ್ಗೆ ನಡೆದ ‘ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ’ ಮುಗಿಸಿ, ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಬಂಡೆಪ್ಪ ಖಾಶೆಂಪುರ್ ರವರ ನಿವಾಸದಲ್ಲಿ ಮಧ್ಯಾಹ್ನದ ಊಟ ಮುಗಿಸಿದ ನಿಖಿಲ್ ಕುಮಾರಸ್ವಾಮಿರವರು ಸಂಜೆಯ ವೇಳೆಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು.

ವೇದಿಕೆ ಕಾರ್ಯಕ್ರಮಕ್ಕೆ ತೆರಳುವ ಮೊದಲು ಅವರು, ಮನ್ನಾಎಖೇಳ್ಳಿಯ ಹೊರವಲಯದಲ್ಲಿರುವ ಪ್ರಸಿದ್ಧ ದೇವಸ್ಥಾನವಾಗಿರುವ ಶ್ರೀ ಬಾಲಮ್ಮ ದೇವಿಯ ಮಂದಿರಕ್ಕೆ ಭೇಟಿ ನೀಡಿ, ಬಾಲಮ್ಮ ತಾಯಿಯ ದರ್ಶನ ಪಡೆದರು. ಅಲ್ಲಿಂದ ವೇದಿಕೆ ಕಾರ್ಯಕ್ರಮದ ಸ್ಥಳಕ್ಕೆ ರ್ಯಾಲಿಯಲ್ಲಿ ತೆರಳಬೇಕಾಗಿದ್ದ ನಿಖಿಲ್ ಕುಮಾರಸ್ವಾಮಿರವರು ಮಳೆಯ ಕಾರಣದಿಂದಾಗಿ ಕಾರ್ ನಲ್ಲೇ ವೇದಿಕೆ ಕಾರ್ಯಕ್ರಮದ ಕಡೆಗೆ ಸಾಗಿದರು.

ಈ ವೇಳೆ ಜಿಟಿಜಿಟಿ ಮಳೆಯೇ ನಡುವೆಯೇ ಮಾರ್ಗ ಮಧ್ಯದಲ್ಲಿ ಅನೇಕ ಕಡೆಗಳಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ನಾಯಕರಿಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಜೆಸಿಬಿಗಳ ಮೂಲಕ ಬೃಹತ್ ಗಾತ್ರದ ಹಾರಗಳನ್ನು ಹಾಕಿ, ಹೂಮಳೆ ಸುರಿಸಿ, ಹೆಚ್.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಖಾಶೆಂಪುರ್ ಸೇರಿದಂತೆ ಜೆಡಿಎಸ್ ಪಕ್ಷದ ನಾಯಕರ ಪರವಾಗಿ ಜಯ ಘೋಷ ಮೊಳಗಿಸಿದರು.

ನಂತರ ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಖಾಶೆಂಪುರ್, ರಮೇಶ್ ಪಾಟೀಲ್ ಸೋಲ್ಪೂರ್ ಸೇರಿದಂತೆ ಜೆಡಿಎಸ್ ಪಕ್ಷದ ನಾಯಕರು, ಮುಖಂಡರು ಜ್ಯೋತಿ ಬೆಳಗಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದುದ್ದಕ್ಕೂ ಜೆಡಿಎಸ್ ನಾಯಕರಿಗೆ ಶಾಲು, ದೊಡ್ಡ ದೊಡ್ಡ ಹಾರಗಳನ್ನು ಹಾಕಿ, ಸನ್ಮಾನಿಸಿ ಗೌರವಿಸಿದ ಮುಖಂಡರು, ಕಾರ್ಯಕರ್ತರು, ತಮ್ಮ ಪಕ್ಷದ ನಾಯಕರ ಪರವಾಗಿ ಜಯ ಘೋಷ ಮೊಳಗಿಸಿದರು. ಕಾರ್ಯಕ್ರಮದ ನಂತರ ನಿಖಿಲ್ ಕುಮಾರಸ್ವಾಮಿರವರು ಮನ್ನಾಎಖೇಳ್ಳಿಯಲ್ಲಿರುವ ಜೆಡಿಎಸ್ ಮುಖಂಡರಾದ ಸಂತೋಷ ರಾಸೂರ್ ರವರ ಮನೆಗೆ ಭೇಟಿ ನೀಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್, ಬೀದರ್ ದಕ್ಷಿಣ ಜೆಡಿಎಸ್ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ, ಮಾಜಿ ಶಾಸಕರಾದ ನಾಗಮಂಗಲದ ಸುರೇಶ್ ಗೌಡ, ಬಸವಕಲ್ಯಾಣದ ಮಲ್ಲಿಕಾರ್ಜುನ್ ಖೂಬಾ, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಐಲಿಂಜಾನ್ ಮಠಪತಿ, ಸಂತೋಷ ರಾಸೂರ್, ಶಾಂತಲಿಂಗ ಸಾವಳಗಿ, ರಾಜಶೇಖರ್ ಜವಳೆ, ಅಶೋಕ್ ಕೊಡ್ಗೆ, ಮನೋಹರ್ ದಂಡಿ, ಶಿವರಾಜ ಹುಲಿ, ಬಸವರಾಜ್ ಪಾಟೀಲ್ ಹಾರೂರಗೇರಿ, ಮಹಮ್ಮದ್ ಅಶೋದೊದ್ದೀನ್, ಸಜ್ಜದ್ ಸಾಹೇಬ್, ಸಿದ್ರಾಮಪ್ಪ ವಂಕ್ಕೆ, ಮಲ್ಲಿಕಾರ್ಜುನ ನೆಳ್ಗೆ, ಅಭಿ ಕಾಳೆ, ಸುದರ್ಶನ್ ಸುಂದದರಾಜ್, ಜಾಫೇಡ್ ಕಡ್ಯಾಳ, ಶಂಕರ್ ರವರು ಸೇರಿದಂತೆ ಅನೇಕರಿದ್ದರು.


Spread the love

LEAVE A REPLY

Please enter your comment!
Please enter your name here