ಚೆನ್ನೈ:- ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಶಂಕಿಸಿ ಗಂಡನೇ ಪತ್ನಿಯನ್ನು ಮುಗಿಸಿರುವ ಘಟನೆ ತಮಿಳುನಾಡಿನ ಅವಧಿ ಜಿಲ್ಲೆಯಲ್ಲಿ ಜರುಗಿದೆ.
ಗೋಮಿತಿ ಮೃತ ಹೆಂಡ್ತಿ. ಇವರು ವಿಸಿಕೆ ಪಕ್ಷದಿಂದ ಕೌನ್ಸಿಲರ್ ಆಗಿ ಸ್ಥಳೀಯ ಸಂಸ್ಥೆಗೆ ಆಯ್ಕೆಯಾಗಿದ್ದರು. ಗೋಮಿತಿ ಅವರು, ತಿರುನಿನರವೂರ್ ನಗರದ ಜಯರಾಮ ನಗರ ರಸ್ತೆಯಲ್ಲಿ ನಿಂತುಕೊಂಡು ಮತ್ತೊಬ್ಬ ವ್ಯಕ್ತಿಯ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಪತಿ ಸ್ಟೀಫನ್ ರಾಜ್ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಗಂಡ- ಹೆಂಡತಿ ನಡುವೆ ಜಗಳ ಶುರುವಾಗಿ ವಿಕೋಪಕ್ಕೆ ಹೋಗಿದೆ. ತಕ್ಷಣವೇ ಪತಿ ಸ್ಟೀಫನ್ ರಾಜ್, ಚಾಕುವಿನಿಂದ ಗೋಮತಿ ಮೇಲೆ ದಾಳಿ ನಡೆಸಿದ್ದಾನೆ. ಕೆಳಕ್ಕೆ ಕುಸಿದು ಬಿದ್ದ ಗೋಮತಿ, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಹೀಗೆ ಪತ್ನಿಯನ್ನು ಮುಗಿಸಿದ ಬಳಿಕ ಸ್ಟೀಫನ್ ರಾಜ್, ನೇರ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರು, ಆರೋಪಿ ಸ್ಟೀಫನ್ ರಾಜ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.