ಅಶ್ಲೀಲ ವಿಡಿಯೋ: ಪೊಲೀಸರ ತನಿಖೆಯಲ್ಲಿ ಹಿಂದೂ ಮುಖಂಡನ ಕರ್ಮಕಾಂಡ ಬಟಾ ಬಯಲು!

0
Spread the love

ಮಂಗಳೂರು:- ಹಿಂದೂ ಮುಖಂಡನೋರ್ವನ ಫೋನ್ ನಲ್ಲಿ 50 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆಯಾಗಿದ್ದು, ಅಚ್ಚರಿ ಅಂದ್ರೆ ಇದರಲ್ಲಿ ರಾಜಕಾರಣಿಯೋರ್ವರ ವಿಡಿಯೋ ಕೂಡ ಸೆರೆಯಾಗಿದೆ.

Advertisement

ಈ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಜರುಗಿದೆ. ಮಂಗಳೂರು ಪೊಲೀಸರ ತನಿಖೆ ವೇಳೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ ಮೊಬೈಲ್​​​ನಲ್ಲಿ ಐವತ್ತಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಇದರಲ್ಲಿ ಕರಾವಳಿ ರಾಜಕಾರಣಿಯೊಬ್ಬರ ವಿಡಿಯೋ ಕೂಡ ಇದೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತಾಗಿ ಮೂಡಬಿದಿರೆ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ.

ಅಪಘಾತವೆಸಗಿದ ಖಾಸಗಿ ಬಸ್​ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣದಲ್ಲಿ ಸಮಿತ್ ರಾಜ್ ಧರೆಗುಡ್ಡೆರನ್ನು ಮೂಡಬಿದಿರೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಪೊಲೀಸರು ದತ್ತಾಂಶಗಳನ್ನು ಎಕ್ಸ್‌ಟ್ರಾಕ್ಟ್ ಮಾಡಿಸಲು ಕೋರ್ಟ್ ಮತ್ತು ಮೇಲಾಧಿಕಾರಿಗಳ ಅನುಮತಿ ಪಡೆದಿದ್ದರು. ಅದರಂತೆ ಮೊಬೈಲ್ ಡೇಟಾ ಎಕ್ಸ್‌ಟ್ರಾಕ್ಟ್​​ ವೇಳೆ ಸ್ವತಃ ಪೊಲೀಸರೇ ಬೆಚ್ಚಿ ಬಿದಿದ್ದಾರೆ. 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ತುಣುಕುಗಳು ಪತ್ತೆ ಆಗಿವೆ.

ವಿಡಿಯೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಸಂದೇಶ್​ರಿಂದ ದೂರು ನೀಡಲಾಗಿದ್ದು, ಮೂಡಬಿದಿರೆ ಠಾಣೆಯಲ್ಲಿಈ ಸಂಬಂಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ, ಬೇರೆಯವರಿಗೆ ಕಳುಹಿಸುವ ಅಥವಾ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಸಾಧ್ಯತೆ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ.

ಸದ್ಯ ಮೂಡಬಿದಿರೆ ಪೊಲೀಸರು ವಿಡಿಯೋದ ಮೂಲ ಪತ್ತೆ ಹಚ್ಚಲು ಮುಂದಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here