ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿವಾದದ ಬಗ್ಗೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಹೇಮಾವತಿ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
Advertisement
ಎಕ್ಸ್ಪ್ರೆಸ್ ಕೆನಾಲ್ ನಿರ್ಮಾಣದಿಂದ ತುಮಕೂರು ಜಿಲ್ಲೆಗೆ ಅನ್ಯಾಯ ಆಗೋದನ್ನು ಮನವರಿಕೆ ಮಾಡಿದ್ದೇವೆ. ಕುಣಿಗಲ್ ತಾಲೂಕಿಗೆ ಹೋಗಬೇಕಾದ 3 ಟಿಎಮ್ ಸಿ ನೀರು ಹರಿಯಲು ನಮ್ಮ ಅಡ್ಡಿಯಿಲ್ಲ. ನಿಮ್ಮ ಪಾಲಿನ ನೀರು ನೀವು ಪಡೆಯುವುದಕ್ಕೆ ಯಾರ ತಕರಾರೂ ಇಲ್ಲ. ಅದನ್ನು ತೆಗೆದುಕೊಂಡು ಹೋಗಲು ನೀವು ಮಾಡಿರುವ ವ್ಯವಸ್ಥೆ ಸರಿ ಇಲ್ಲ, ಅದನ್ನ ಸರಿ ಮಾಡಿ ಅಂದಿದ್ದೇವೆ ಅಷ್ಟೇ ಎಂದರು.