‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಧನಂಜಯ ಫಸ್ಟ್‌ ಲುಕ್‌ ರಿಲೀಸ್: ಡಿಫರೆಂಟ್‌ ಲುಕ್‌ ನಲ್ಲಿ ಡಾಲಿ

0
Spread the love

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಹಾಗೂ ಡಾಲಿ ಧನಂಜಯ್‌ ನಟನೆಯ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಸದ್ಯ ಡಾಲಿ ಧನಂಜಯ್ ಅವರ ಫಸ್ಟ್‌ ಲುಕ್‌ ಅನಾವರಣ ಮಾಡಲಾಗಿದ್ದು ಫಸ್ಟ್‌ ಲುಕ್‌ ನಲ್ಲಿ ಡಾಲಿ ಧನಂಜಯ್‌ ಮಾಸ್‌ ಮತ್ತು ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ಧನಂಜಯ್‌ ಡಿಫರೆಂಟ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್‌ ಆಗಿರುವ ಪೋಸ್ಟರ್‌ ನಲ್ಲಿ ನಟ ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಧನಂಜಯ್‌ ನೋಡಿದರೆ ಹಳೇ ಕಾಲದ ನೆನಪು ಬರುವಂತಿದೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಡಾಲಿ ಧನಂಜಯ್‌, ‘ಒಬ್ಬ ನಟ ದೊಡ್ಡ ದೃಷ್ಟಿಕೋನ ಹಾಗೂ ಸಿನಿಮಾದ ಬಗ್ಗೆ ಉತ್ಸಾಹ ಹೊಂದಿರುವ ನಿರ್ದೇಶಕರನ್ನು ಕಂಡುಕೊಂಡಾಗ ಮಗುವಿನಂತೆ ನಟರು ನಟನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಆ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾನೆ. ತಂಡವು ತಮ್ಮ ಹೃದಯ ಮತ್ತು ಆತ್ಮವನ್ನು ಒಂದು ಯೋಜನೆಗೆ ಸೇರಿಸಿದಾಗ ಆ ನಟ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಾನೆ’ ಎಂದಿದ್ದಾರೆ.

‘ಹೇಮಂತ್ ಎಂ. ರಾವ್, ನಿರ್ಮಾಪಕ ವೈಶಾಕ್ ಜೆ. ಗೌಡ, ಸಂಗೀತ ನಿರ್ದೇಶಕ ಚರಣ್ ರಾಜ್, ಕ್ಯಾಮೆರಾ ಮ್ಯಾನ್ ಅದ್ವೈತ ಗುರುಮೂರ್ತಿ ಅವರಂತಹ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. 666 ಆಪರೇಷನ್ ಡ್ರೀಮ್ ಥಿಯೇಟರ್, ಪ್ರೇಕ್ಷಕರನ್ನು ಆರಂಭದಿಂದಲೇ ಹಿಡಿದಿಟ್ಟುಕೊಳ್ಳುವ ಸಿನಿಮಾ. ನಾನು ಖಚಿತವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಈ ಚಿತ್ರವು ವಿಭಿನ್ನ ಜಗತ್ತಿನಲ್ಲಿ ನಡೆಯುತ್ತದೆ ಮತ್ತು ನಾವು ಹಲವಾರು ಅಚ್ಚರಿಗಳನ್ನು ಜೋಡಿಸಿದ್ದೇವೆ’ ಎಂದು ಧನಂಜಯ ಹೇಳಿದ್ದಾರೆ.
666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾವನ್ನು ಹೇಮಂತ್‌ ಎಂ ರಾವ್‌ ನಿರ್ದೇಶನ ಮಾಡುತ್ತಿದ್ದು ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here