ದಾವಣಗೆರೆ ಪಿಎಸ್ಐ ತುಮಕೂರಿನಲ್ಲಿ ಆತ್ಮಹತ್ಯೆ.! ಕೌಟುಂಬಿಕ ಕಲಹವೇ ಸಾವಿಗೆ ಕಾರಣವಾಯ್ತಾ..?

0
Spread the love

ತುಮಕೂರು: ತುಮಕೂರಿನಲ್ಲಿ ದಾವಣಗೆರೆ ಪೊಲೀಸ್ ಠಾಣೆಯ ಪಿಎಸ್ಐ‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಜರುಗಿದೆ. ಇದು ಪೊಲೀಸ್ ಅಧಿಕಾರಿಗಳಿಗೆ ದಂಗು ಬಡಿಸಿದ್ದು, ಆತ್ಮಹತ್ಯೆಗೆ ಕಾರಣವಾಗಿ ಡೆತ್ ನೋಟ್ ಕೂಡ ಬರೆದಿಟ್ಟು ಹೋಗಿದ್ದಾರೆ.

Advertisement

ನೇಣಿಗೆ ಶರಣಾದವರನ್ನು ದಾವಣಗೆರೆ ಬಡಾವಣೆಯ ಪಿಎಸ್ಐ ನಾಗರಾಜು (59) ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜು, ತಮ್ಮ ಬದುಕಿಗೆ ಏಕೆ ಅಂತ್ಯ ಹಾಡಿದ್ದಾರೆ ಎಂಬ ಪ್ರಶ್ನೆ ಎಲ್ಲೆಡೆ ಉದ್ಭವವಾಗಿದೆ. ಲಾಡ್ಜ್ ಕೊಠಡಿಯಲ್ಲಿ ಡೆತ್ ನೋಟ್ ಬರೆದಿಟ್ಟು ಹೋದ ಅವರು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮನವಿ ಮಾಡಿದ್ದಾರೆ.
ಡೆತ್ ನೋಟ್ ನಲ್ಲಿ ಕೌಟುಂಬಿಕ ಕಲಹವೇ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ.

ಮಗನಿಗೆ ಕೆಲಸ ಕೊಡಿಸಿ, ಮಗಳು ಹಾಗೂ ಅಳಿಯ ತುಂಬಾ ಒಳ್ಳೆಯವರು, ಅಳಿಯ ನನ್ನ ಮಗನಷ್ಟೆ” ಎಂದು ಭಾವುಕರಾಗಿ ಬರೆದಿದ್ದಾರೆ ನಾಗರಾಜು. ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ಸಿಪಿಐ ಅವಿನಾಶ್ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here