ಬೆಂಗಳೂರು: ರಾಜಧಾನಿಯ ಜ್ಞಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿ ಜುಲೈ 5ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಭೀಕರ ಅಪಘಾತ ಸಂಭವಿಸಿದೆ.
Advertisement
ಬ್ಯಾಡರಹಳ್ಳಿ ಕಡೆಯಿಂದ ಕೆಂಗೇರಿ ಕಡೆಗೆ ತೆರಳುತ್ತಿದ್ದ ಟೆಂಪೋ ಡಿವೈಡರ್ ಗೆ ಡಿಕ್ಕಿ ಹೊಡೆದು ಎರಡು ಭಾಗಗಳಾಗಿ ಚೂರುಚೂರಾಗಿದ್ದು, ಟೆಂಪೋ ಕ್ಯಾಬಿನ್ ಬ್ರಿಡ್ಜ್ ನಿಂದ ನೇರವಾಗಿ ಕೆಳಗೆ ಬಿದ್ದರೆ, ಬಾಡಿ ಭಾಗ ಬ್ರಿಡ್ಜ್ ಮೇಲೆಯೇ ನಿಂತುಹೋಯ್ತು.
ಅಪಘಾತದ ತೀವ್ರತೆಗೆ ಚಾಲಕ ರಾಘವೇಂದ್ರ ನೇತಾಡುತ್ತಾ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಷ್ಟೇ ಅಲ್ಲ, ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರಾದ ಸಲೀಂ ಮತ್ತು ಫಯಾಜ್ ಕೂಡ ಗಾಯಗೊಂಡಿದ್ದಾರೆ.
ಸ್ಥಳೀಯರು ತಕ್ಷಣ ಆಂಬ್ಯುಲೆನ್ಸ್ ಕರೆದಿದ್ದು, ಮೂವರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಜ್ಞಾನಭಾರತಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.