ಕೊಪ್ಪಳ:– ಗ್ರಾಮೀಣ ರಸ್ತೆ ಮಾಡಿಸೋದು ಕಷ್ಟ, ಹಣ ನೋಡಿ ಮಾಡಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಮಗೆ ಗ್ಯಾರಂಟಿ ಬೇಡ ಎಂದು ಹೇಳಿ. ನಮ್ಮ ಜನ ಏನೂ ಬೇಡ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ಕೊಡ್ತೀನಿ ಎಂದಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮೀ ಕೊಡ್ತೀರಿ. ನಮಗೆ ರಸ್ತೆ ಕೊಡಿ ಎಂದು ಕೇಳಿದ ಜನರಿಗೆ ಅವರು ಈ ರೀತಿ ಉತ್ತರಿಸಿದ್ದಾರೆ. ಗ್ರಾಮೀಣ ರಸ್ತೆ ಮಾಡಸೋದು ಕಷ್ಟ. ನಮ್ಮ ಬಳಿ ಇರುವ ಹಣದಲ್ಲಿ ನೋಡಿ ಮಾಡಬೇಕು ಎಂದಿದ್ದಾರೆ.
1.24 ಲಕ್ಷ ಕೋಟಿ ರೂ. ವಿವಿಧ ಉಚಿತ ಯೋಜನೆಗಳಿಗೆ ಹಣ ನೀಡುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳಿಂದ ನೇರವಾಗಿ 54 ಕೋಟಿ ರೂ.ನೀಡುತ್ತಿದ್ದೇವೆ. ಬರುವ ದಿನಗಳಲ್ಲಿ ರಸ್ತೆಗಳಿಗೂ ಹಣ ನೀಡುತ್ತೇವೆ, ಹಳ್ಳಿ ರಸ್ತೆಗಳನ್ನು ಸರಿಪಡಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ.