ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳು: ಕೋವಿಡ್ ಲಸಿಕೆ ಕಾರಣವಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

0
Spread the love

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಆರೋಗ್ಯ ಇಲಾಖೆ ತೀವ್ರ ಗಮನ ಹರಿಸಿತು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಜ್ಞರೊಂದಿಗೆ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯಾಘಾತಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.

Advertisement

“ಲಸಿಕೆ ಸುರಕ್ಷಿತ – ಮರಣೋತ್ತರ ಪರೀಕ್ಷೆ ಕಡ್ಡಾಯ”

ಸಚಿವರು ಮುಂದುವರಿಸಿ, “ಕರೋನಾದಿಂದ ಗುಣಮುಖರಾದವರು ಕೆಲವೊಮ್ಮೆ ಹೃದಯಾಘಾತಕ್ಕೆ ಒಳಗಾಗಿರುವುದು ವರದಿಯಾಗಿದೆ. ಕರೋನಾದ ನಂತರ 1 ವರ್ಷದ ಒಳಗೆ ರಕ್ತನಾಳಗಳಲ್ಲಿ ಬ್ಲಾಕೇಜ್ ಆಗುವ ಸಾಧ್ಯತೆ ಇದೆ. ಆದರೆ, ಮೂರು ವರ್ಷಗಳ ನಂತರ ಅದರಿಂದ ಯಾವುದೇ ಗಂಭೀರ ಪರಿಣಾಮವಿಲ್ಲ,” ಎಂದು ಹೇಳಿದರು. ಮತ್ತೊಂದೆಡೆ, ಎಂಆರ್‌ಎನ್‌ಎ ಲಸಿಕೆ ಕುರಿತು ಜನರಲ್ಲಿ ಕುತೂಹಲವಿದೆ ಎಂದು ಅವರು ಒಪ್ಪಿಕೊಂಡರೂ, ಈ ಲಸಿಕೆಯನ್ನು ಭಾರತದಲ್ಲಿ ಯಾರೂ ತೆಗೆದುಕೊಳ್ಳಿಲ್ಲ ಎಂದು ಸ್ಪಷ್ಟಪಡಿಸಿದರು.


Spread the love

LEAVE A REPLY

Please enter your comment!
Please enter your name here