ಬೆಂಗಳೂರು: ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಯಾವ ಹೃದಯಾಘಾತವೂ ಆಗೋದಿಲ್ಲ ಎಂದು ಮಾಜಿ ಸಚಿವ, ಶಾಸಕ ಎ.ಮಂಜು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೃದಯಾಘಾತದಿಂದ ಸಾವು ಕೇವಲ ಹಾಸನದಲ್ಲಿ ಮಾತ್ರ ಅಲ್ಲ,
ಇಡೀ ದೇಶದಲ್ಲಿ ಆಗುತ್ತಿದೆ. ಹಾಸನದಲ್ಲಿ ಸಾವನ್ನಪ್ಪಿರೋರಲ್ಲಿ ಇಬ್ಬರೇ ಪೋಸ್ಟ್ ಮಾರ್ಟಮ್ ಮಾಡಿಕೊಂಡಿದ್ದಾರೆ. ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಯಾವ ಹೃದಯಾಘಾತವೂ ಆಗೋದಿಲ್ಲ ಎಂದರು.
ಇನ್ನೂ ಇನ್ನೊಂದು ಕಡೆ ಕೋವಿಡ್ ಇಂಜೆಕ್ಷನ್ನಿಂದ ಬಂದಿದೆ ಅಂತ ಮುಖ್ಯಮಂತ್ರಿಗಳು ಹೇಳುತ್ತಾರೆ. ಅಲ್ಲಾ ರೀ ಮೋದಿ ಇಂಜೆಕ್ಷನ್ ತಯಾರು ಮಾಡ್ತಾರಾ? ಲ್ಯಾಬ್ನಲ್ಲಿ ಇಂಜೆಕ್ಷನ್ ತಯಾರು ಮಾಡುತ್ತಾರೆ.
ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಅಂತ ನಂಗೆ ರಿಪೋರ್ಟ್ ಬಂದಿದೆ. ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಎಲ್ಲರೂ ಚೆನ್ನಾಗಿ ಇರುತ್ತಾರೆ. ಜಯದೇವ ಆಸ್ಪತ್ರೆಗೆ ಹೋಗಿ ಪರಿಶೀಲನೆ ಮಾಡಿ ಯಾರೋ ಹೇಳಿದ್ದನ್ನ ತೋರಿಸಬೇಡಿ. ಎಲ್ಲಾ ಜಿಲ್ಲೆಗಳಲ್ಲೂ ಹೃದಯಾಘಾತವಾಗುತ್ತಿದೆ ಎಂದು ತಿಳಿಸಿದರು.