ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿಯ ಹಾತಲಗೇರಿ ರಸ್ತೆಯಲ್ಲಿಯ ಕುಂಬಾರ ಸಮಾಜ ಸಮುದಾಯ ಭವನಕ್ಕೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರೂ 10 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂದಾಜು 3 ಲಕ್ಷ ರೂ.ಗಳ ಅನುದಾನವನ್ನು ಸಮುದಾಯ ಭವನ ನಿರ್ಮಾಣ ಮಾಡಲು ಮಂಜೂರಿ ಮಾಡಿದ್ದು, ಕಟ್ಟಡ ನಿರ್ಮಾಣಕ್ಕೆ ಸಚಿವರು, ಶಾಸಕರು ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಗದಗ-ಬೆಟಗೇರಿ ಕುಂಬಾರ ಸಮಾಜದ ಅಧ್ಯಕ್ಷ ಶಿವಾನಂದ ಚಕ್ರಸಾಲಿ, ಕುಂಬಾರ ಸಮಾಜದ ಸಮುದಾಯ ಭವನದ ಹಲವು ವರ್ಷಗಳ ಕನಸು ನನಸಾಗಿದ್ದು, ನಮ್ಮ ಸಮಾಜ ತಮಗೆ ಋಣಿಯಾಗಿರುತ್ತದೆ. ನಮ್ಮ ಸಮುದಾಯವು ಆರ್ಥಿಕ, ಶೈಕ್ಷಣಿಕ, ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ನಮ್ಮ ಸಮುದಾಯಕ್ಕೆ ರಾಜಕೀಯವಾಗಿ ಬಲ ನೀಡುವದರೊಂದಿಗೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬೆಂಬಲ ನೀಡಬೇಕು ಎಂದು ವಿನಂತಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕ್ಬರಸಾಬ್ ಬಬರ್ಚಿ, ಪಂಚ ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ಕಾಂಗ್ರೆಸ್ ಮುಖಂಡ ಪ್ರಭು ಬುರಬುರೆ, ವೀರನಗೌಡ ಪಾಟೀಲ, ಮುಖಂಡ ಎಸ್.ಎನ್. ಬಳ್ಳಾರಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಯುವ ಧುರೀಣ ಅಶೋಕ ಮಂದಾಲಿ, ಕುಂಬಾರ ಸಮಾಜದ ಗೌರವಾಧ್ಯಕ್ಷ ವಿಠ್ಠಲ ಕುಂಬಾರ, ಉಪಾಧ್ಯಕ್ಷ ಮುರೆಗೆಪ್ಪ ಕೆರಿಯವರ, ನಿವೃತ್ತ ತೋಟಗಾರಿಕೆ ಹಿರಿಯ ನಿರ್ದೇಶಕ ಸುರೇಶ ಕುಂಬಾರ, ಜಕ್ಕಪ್ಪ ಕುಂಬಾರ, ವೀರೇಶ ಕುಂಬಾರ, ವೀರಪ್ಪ ಕುಂಬಾರ, ಗ್ರಾ.ಪಂ ಸದಸ್ಯ ವೀರಣ್ಣ ಚಕ್ರಸಾಲಿ, ಆಂಜನೇಯ ಕುಂಬಾರ, ಈಶ್ವರಪ್ಪ ಕುಂಬಾರ, ಮಹೇಶ ಕುಂಬಾರ, ಅನಿಲ ಕುಂಬಾರ ಹಾಜರಿದ್ದರು.