ಧಾರವಾಡ:- ಕರ್ನಾಟಕದಲ್ಲಿ ಹೃದಯಾಘಾತ ಸರಣಿ ಸಾವಿನ ಸರಣಿ ಮುಂದುವರಿದಿದೆ. ಧಾರವಾಡದಲ್ಲಿ 56 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ಶಾಂತವ್ವ ತೋಟಗೇರ ಸಾವನ್ನಪ್ಪಿದ ಮಹಿಳೆ. ಇವರು ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ನಿವಾಸಿ ಎನ್ನಲಾಗಿದೆ. ನಿನ್ನೆ ಮಗಳನ್ನು ಗಂಡನ ಮನೆಯಿಂದ ಕರೆದುಕೊಂಡು ಬರಲು ಹೆಬ್ಬಳ್ಳಿ ಗ್ರಾಮಕ್ಕೆ ಬಂದಿದ್ದರು. ಆಗ ಎದೆನೋವು ಕಾಣಿಸಿಕೊಂಡಿತ್ತು.
ಬಳಿಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕುಟುಂಬದವರು ರವಾನೆ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.
ಇನ್ನೂ ಸೈಲೆಂಟ್ ಕಿಲ್ಲರ್ ‘ಹೃದಯಾಘಾತ’ ಪ್ರಸ್ತುತ ಹೆಚ್ಚು ಮಾರಕವಾಗುತ್ತಿದೆ. ಜಾಗತಿಕವಾಗಿ ಹೃದಯಾಘಾತದಿಂದ ಸಾವು ಆಗುತ್ತಿರುವ ಪ್ರಕರಣಗಳು ಜಗತ್ತಿನಲ್ಲಿ ಹೆಚ್ಚುತ್ತಿವೆ. ಯುವಕರು, ಹಿರಿಯರು ಎಂಬ ಭೇದವಿಲ್ಲದೆ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.