ವಿಜಯಸಾಕ್ಷಿ ಸುದ್ದಿ, ರೋಣ: ಮಾರನಬಸರಿ ಗ್ರಾಮದ ದೊಡ್ಡ ಮಸೂತಿ ದೊಡ್ಡ ದೇವರು ಈ ಬಾರಿಯೂ ರಾಜಕೀಯ ವಿದ್ಯಾಮಾನವನ್ನು ತೋರ್ಪಡಿಸಿದ್ದು, ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಕೈ ಮೇಲುಗೈ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.
ಗ್ರಾಮದ ಅಲೈದೇವರು ರಾಜಕೀಯದ ಬಗ್ಗೆ ನಿಖರ ಮಾಹಿತಿ ನೀಡುವುದು ಇಲ್ಲಿನ ವಾಡಿಕೆಯಾಗಿದ್ದು ಹಲವು ಸಂದರ್ಭಗಳಲ್ಲಿ ಅದು ನಿಜವೂ ಆಗಿದೆ. ಹೀಗಾಗಿ, ಇಲ್ಲಿ ರಾಜಕೀಯ ಭವಿಷ್ಯ ಅರಿಯಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಕತ್ತಲ್ ರಾತ್ರಿಯ ಬೆಳಗಿನ ಜಾವ ದೊಡ್ಡ ಮಸೂತಿಯ ದೊಡ್ಡ ದೇವರು ಹಳೆ ಗ್ರಾ.ಪಂ ದ್ವಜ ಕಟ್ಟೆಯ ಮೆಲೆ ನಿಂತು ಹಸ್ತದ ಚಿಹ್ನೆ ಗೆಲ್ಲಲಿದೆ ಎಂದು ತೋರ್ಪಡಿಸಿದ್ದು ಭಕ್ತರಲ್ಲಿ ಚರ್ಚೆಗೆ ಕಾರಣವಾಗಿದೆ.
ಅಲ್ಲದೆ ದ್ವಜದ ಕಟ್ಟೆ ಹತ್ತಿ ಉತ್ತತ್ತಿ ಎಸೆದಾಗ ಮಿಶ್ರ ಸರಕಾರ ರಾಜ್ಯ, ದೇಶದಲ್ಲಿ ಬರುತ್ತದೆ ಎಂಬ ನಂಬಿಕೆಯಿದ್ದು, ಅದು ಕೂಡ ನಿಜವಾಗಿದೆ. ಇನ್ನು ಅಲೈದೇವರ ಹೆಳಿಕೆ ಬಗ್ಗೆ ಭಕ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬಂದರೂ ಸಹ ಅದರಲ್ಲಿ ಎರಡು ಪಕ್ಷಗಳ ಶಾಸಕರಿರುತ್ತಾರೆ ಎನ್ನುವುದು ಒಂದು ಕಡೆಯಾದರೆ, ಕೇಂದ್ರ ಸರಕಾರ ಪತನವಾಗಲಿದ್ದು, ಹಲವು ಪಕ್ಷಗಳು ಕೂಡಿ ಕಾಂಗ್ರೆಸ್ ನೇತೃತ್ವದಲ್ಲಿ ಸರಕಾರ ರಚನೆ ಮಾಡಲಿವೆ ಎನ್ನುವುದು ಮತ್ತೊಂದು ಕಡೆಯ ಭಕ್ತರ ವಿಚಾರವಾಗಿದೆ.