ಶಿವಮೊಗ್ಗ :– ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ದೆವ್ವ ಬಿಡಿಸುತ್ತೇನೆಂದು ಹೇಳಿ ಚಿತ್ರಹಿಂಸೆ ನೀಡಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಜರುಗಿದೆ.
Advertisement
ಗೀತಮ್ಮ (50) ಸಾವನ್ನಪ್ಪಿದ ಮಹಿಳೆ. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೀತಮ್ಮನನ್ನು ದೆವ್ವ ಹಿಡಿದಿದೆ ಎಂದು ಮಗನೇ ಕರೆದುಕೊಂಡು ಹೋಗಿದ್ದ. ಈ ವೇಳೆ ದೆವ್ವಾ ಬಿಡಿಸುತ್ತೇನೆ ಎಂದು ಶಾಂತಮ್ಮ ಎಂಬ ಮಹಿಳೆ ಗೀತಮ್ಮನಿಗೆ ಚಿತ್ರಹಿಂಸೆ ನೀಡಿದ್ದಾಳೆ. ಚಿತ್ರಹಿಂಸೆ ತಾಳಲಾರದೇ ಗೀತಮ್ಮ ಸಾವನ್ನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.