ಮೂಡಿಗೆರೆ: ವಾಹನ ಸವಾರರು ನೋಡಲೇಬೇಕಾದ ಸ್ಟೋರಿ ಇದು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಂಜು ಆವರಿಸಿರುವುದರಿಂದ ವಾಹನ ಸವಾರರು ತೊಂದರೆ ಪಡುವಂತಾಗಿದೆ.
Advertisement
ಕೆಲವು ಕಡೆ 5 ಅಡಿ ದೂರವೂ ಕಾಣದಷ್ಟು ಮಂಜು ಆವರಿಸಿದೆ. ಹಗಲಲ್ಲೇ ವಾಹನ ಚಾಲನೆ ಕಠಿಣವಾಗಿದ್ದು, ರಾತ್ರಿ ವೇಳೆ ಇನ್ನಷ್ಟು ಅಪಾಯಕಾರಿಯಾಗಿದೆ. ಘಾಟಿಯ ತಿರುವುಗಳಲ್ಲಿ ಹಾವು-ಬಳುಕಿನ ರಸ್ತೆಯಲ್ಲಿ ಸರಿಯಾಗಿ ದಟ್ಟ ಮಂಜಿನ ನಡುವೆ ತಿರುವುಗಳು ಗೋಚರವಾಗದೆ ಚಾಲನೆ ಕಷ್ಟಕಾರಕವಾಗುತ್ತಿದೆ. ಹೀಗಾಗಿ
ವಾಹನ ಸವಾರರು ಹೆಡ್‌ಲೈಟ್ ಜೊತೆಗೆ ಹಾರನ್ ಬಾರಿಸುತ್ತಾ ಸಾಗುವುದು ಸುರಕ್ಷಿತ. ಘಾಟ್ ರಸ್ತೆಗಳಲ್ಲಿ ವಾಹನಗಳು ನಿಯಂತ್ರಣ ತಪ್ಪಿದ್ರೆ ಪಲ್ಟಿ ಆಗುವ ಸಾಧ್ಯತೆ ಹೆಚ್ಚಿದೆ.
ಅಲ್ಲದೇ ಚಾರ್ಮಾಡಿ ಘಾಟ್ ನಲ್ಲಿ ರಸ್ತೆಯೊಂದೆಡೆ ಆದರೆ ಮತ್ತೊಂದೆಡೆ ಪ್ರಪಾತವಿರುವುದರಿಂದ ವಿಶೇಷವಾಗಿ ರಾತ್ರಿ ಸಮಯದಲ್ಲಿ ಪ್ರಯಾಣಿಸುವವರು ಎಚ್ಚರಿಕೆಯಿಂದ ಸಾಗಬೇಕಿದೆ.