ಶಿಕ್ಷಕರಿಗೆ ತರಬೇತಿಗಳು ಅವಶ್ಯಕ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರು ರಾಷ್ಟ್ರೋತ್ಥಾನ ಪರಿಷತ್, ಗದಗ ಶಿಕ್ಷಣ ಭಾರತಿ ಆಶ್ರಯದಲ್ಲಿ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Advertisement

ಶಾಲೆಯ ನೂತನ ಸದಸ್ಯ ವೀರಣ್ಣ ಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸಕರಾಗಿ ಆಗಮಿಸಿದ್ದ ರಾಷ್ಟ್ರೋತ್ಥಾನ ಪರಿಷತ್‌ನ ವೀರೇಂದ್ರ ಪಾಟೀಲ `ಪಂಚಮುಖಿ ಶಿಕ್ಷಣ’, ಎಸ್.ಎ. ಕಾಲೇಜು ಪ್ರಾಚಾರ್ಯ ವಾಯ್.ಸಿ. ಪಾಟೀಲ `ರಾಷ್ಟ್ರೀಯ ಶಿಕ್ಷಣ ನೀತಿ’, ಸೂಡಿಯ ವಿಜ್ಞಾನ ಶಿಕ್ಷಕ ಅಶೋಕ ಉಂಡಿ `ಆದರ್ಶ ಶಿಕ್ಷಕ’ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಶಾಲೆಯ ಚೇರಮನ್ ಡಾ. ಜಿ.ಕೆ. ಕಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿಗಳು ಅವಶ್ಯಕ. ಶಿಕ್ಷಣ ರಂಗದಲ್ಲಿನ ಅಭಿವೃದ್ಧಿ ಮತ್ತು ಬೆಳವಣಿಗೆಗಳನ್ನು ತಿಳಿಯಲು ಇಂತಹ ಶಿಬಿರಗಳು ಸಹಕಾರಿ ಎಂದರು.

ಈ ಸಂದರ್ಭದಲ್ಲಿ ಎಸ್‌ಎವ್ಹಿವ್ಹಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಸದಸ್ಯ ಬಸವರಾಜ ಕಳಕೊಣ್ಣವರ, ಮುಖ್ಯೋಪಾಧ್ಯಾಯೆ ಬಿ.ಜಿ. ಶಿರ್ಸಿ, ಎಮ್.ವಿ. ಕಡೆತೋಟದ, ಪೂರ್ಣಿಮಾ ಅಂಗಡಿ, ವಿ.ಪಿ. ಗ್ರಾಮಪುರೋಹಿತ, ಎಸ್.ವಿ. ಹಿರೇಮಠ, ವಿ.ಎಸ್. ಜಾಧವ್, ಎಸ್.ಕೆ. ಕುಲಕರ್ಣಿ, ಸಾವಿತ್ರಿ ಮಾನ್ವಿ, ಎಮ್.ಎಮ್. ಶಿಳ್ಳಿನ, ಗೀತಾ ಶಿಂಧೆ, ಕೆ.ಆಯ್. ಕೋಳಿವಾಡ, ಆಯ್.ಬಿ. ಒಂಟೇಲಿ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ, ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ಎಮ್.ಎಸ್. ಧರ್ಮಾಯತ, ಎಸ್.ಎ. ಚೋಳಿನ ಇನ್ನಿತರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here