ಕಲಬುರಗಿ: ಪ್ರಾಣಕ್ಕೆ ಪ್ರಾಣ ಕೊಡ್ತೆನೆ ಅಂತಾ ಹೇಳ್ತಿದ್ದ ಆಪ್ತ ಸ್ನೇಹಿತನನ್ನೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮುರಡಿ ಗ್ರಾಮದಲ್ಲಿ ನಡೆದಿದೆ. ಅಂಬರೀಶ್ (28) ಸ್ನೇಹಿತನಿಂದಲೆ ಕೊಲೆಯಾದ ಯುವಕನಾಗಿದ್ದು,
Advertisement
ಸ್ನೇಹಿತ ಅಜಯ್ ಮತ್ತು ಆತನ ಸ್ನೇಹಿತರಿಂದ ಕೃತ್ಯ ಎಸಗಲಾಗಿದೆ. ಅಜಯ್ ಪತ್ನಿಯ ಜೊತೆಗೆ ಅಂಬರೀಶ್ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಕೆಲವು ದಿನಗಳ ಹಿಂದೆ ಅಜಯ್ ಪತ್ನಿ ಮನೆಯನ್ನು ತೊರೆದಿದ್ದರು. ಪತ್ನಿ ನನ್ನ ಜೊತೆ ಇರಲು ಹೇಳುವಂತೆ ಅಂಬರೀಶ್ ಬೆಂಗಳೂರಿನಿಂದ ಮುರುಡಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದ.
ಈ ವೇಳೆ ತನ್ನ ಮನೆಯಲ್ಲಿಯೇ ಅಂಬರೀಶ್ ನನ್ನು ಅಜಯ್ ಕೊಲೆ ಮಾಡಿದ್ದಾನೆ. ಹತ್ಯೆ ಬಳಿಕ ಅಜಯ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಘಟನೆ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.