ಸಂಪುಟ ಪುನರ್ ರಚನೆ ಕುರಿತು ಚರ್ಚಿಸಲು ನಾವು ದೆಹಲಿಗೆ ಬಂದಿಲ್ಲ: ಡಿಕೆ ಶಿವಕುಮಾರ್

0
Spread the love

ನವದೆಹಲಿ: ಸಂಪುಟ ಪುನರ್ ರಚನೆ ಕುರಿತು ಚರ್ಚಿಸಲು ನಾವು ದೆಹಲಿಗೆ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಕುರಿತು ಚರ್ಚಿಸಲು ನಾವು ದೆಹಲಿಗೆ ಬಂದಿಲ್ಲ.

Advertisement

ಮೈಸೂರು ದಸರಾದಲ್ಲಿ ಏರ್ ಶೋ ಆಯೋಜನೆ ಬಗ್ಗೆ ಮನವಿ ಮಾಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಾಗುತ್ತಿದೆ ಎಂದು ಹೇಳಿದರು. ಕಳಸ, ಮಹದಾಯಿ ಯೋಜನೆ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ನಾವು ಟೆಂಡರ್ ಕರೆದಿದ್ದೇವೆ.

ಆಂಧ್ರ ಮತ್ತು ಗೋವಾದವರು ಶೊಕಾಸ್ ನೋಟಿಸ್ ನೀಡಿದ್ದಾರೆ. 2023 ರಲ್ಲಿ ನೋಟಿಸ್ ನೀಡಿದ್ದರು. ಅವರು ಯಾರು ನಮ್ಮ ರಾಜ್ಯಕ್ಕೆ ನೋಟಿಸ್ ನೀಡಲು? ನೀವು ಕೇಂದ್ರದವರು ಬೇಕಿದ್ದರೆ ಹೇಳಿ, ಹೇಗೆ ಎಲ್ಲಿ ಮಾಡಬೇಕು ಎಂಬುದಾಗಿ. ಅದರಂತೆಯೇ ಮಾಡುತ್ತೇವೆ ಎಂದಿರುವಿದಾಗಿ ಡಿಸಿಎಂ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here