ಗುಜರಾತ್: ಗುಜರಾತ್‌ನ ವಡೋದರಾ ಹಾಗೂ ಆನಂದ್ ಜಿಲ್ಲೆಗಳನ್ನು ಸಂಪರ್ಕಿಸುವ ‘ಗಂಭೀರ’ ಸೇತುವೆ ಕುಸಿದ ದುರಂತದಲ್ಲಿ ನಾಲ್ಕು ವಾಹನಗಳು ನದಿಗೆ ಬಿದ್ದು, ಈಗಾಗಲೇ 9 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಹಲವರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ಸೇತುವೆ ಕುಸಿದ ಸಂದರ್ಭದಲ್ಲಿ ನದಿಯ ಮೇಲೆ ಕಳೆದಿದ್ದ ವಾಹನಗಳು ನೇರವಾಗಿ ನೀರಿನಲ್ಲಿ ಮುಳುಗಿವೆ.
ಇನ್ನೂ ವಡೋದರಾ ಜಿಲ್ಲಾಧಿಕಾರಿ ಅನಿಲ್ ಧಮೇಲಿಯಾ ಸಾವಿನ ಸಂಖ್ಯೆಯನ್ನು ಖಚಿತಪಡಿಸಿದ್ದು, ನಾಲ್ಕು ಜನರಿಗೆ ಸಣ್ಣ ಗಾಯಗಳಾಗಿವೆ, ಐದು ಮಂದಿಯನ್ನು ರಕ್ಷಿಸಲಾಗಿದೆ ಎಂದಿದ್ದಾರೆ. ಆನಂದ್ ಜಿಲ್ಲೆ ಎಸ್‌ಪಿ ಗೌರವ್ ಜಸಾನಿ ಮಾಹಿತಿ ಪ್ರಕಾರ,
ಮೂರರಿಂದ ನಾಲ್ಕು ವಾಹನಗಳು ನದಿಗೆ ಬಿದ್ದಿವೆ ಎಂದು ತಿಳಿಸಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ನದಿಯ ನೀರಿನಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರಬಹುದೆಂಬ ಶಂಕೆಯಿದ್ದು, ಹೆಚ್ಚಿನ ಮೊತ್ತದ ರಕ್ಷಣಾ ತಂಡ ಸ್ಥಳದಲ್ಲಿದೆ.