ಬೆಂಗಳೂರು: ರಾಜ್ಯದ ಶಾಸಕ ಸಿಪಿ ಯೋಗೇಶ್ವರ್ ಅವರ ಕೌಟುಂಬಿಕ ಕಲಹ ಇದೀಗ ಕಾಂಗ್ರೆಸ್ ಹೈಕಮಾಂಡ್ ಮೆಟ್ಟಿಲೇರಿದೆ. ಅವರ ಮಾಜಿ ಪತ್ನಿ ಮಂಜುಳಾ ಹಾಗೂ ಮಗಳು ನಿಶಾ ಯೋಗೇಶ್ವರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ರಣದೀಪ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.
Advertisement
ಇನ್ನೂ ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪತ್ನಿ ಮಂಜುಳಾ ಮಾತನಾಡಿದ್ದಾರೆ. ತಂದೆ ಮಕ್ಕಳ ವಿರುದ್ಧವೇ ಕೇಸ್‌ಗಳು ಹಾಕಿದ್ದಾರೆ. 8 ವರ್ಷಗಳಿಂದ ಕಾನೂನು ಹೋರಾಟದಲ್ಲಿ ನಾವು ತತ್ತರಿಸಿದ್ದೇವೆ. ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರೂ ನ್ಯಾಯ ಸಿಗಲಿಲ್ಲ. ಈಗ ಅನಿವಾರ್ಯವಾಗಿ ಸುರ್ಜೇವಾಲಾ ಅವರನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ.
ನನ್ನ ಮಕ್ಕಳಿಗೆ ನೆಮ್ಮದಿಯಿಂದ ಬದುಕು ಸಾಗಬೇಕು. ಆಸ್ತಿಯಲ್ಲಿ ನಮಗೆ ಸಹ ಹಕ್ಕು ಬೇಕು. ಯಾವ ತಂದೆಯೂ ತಮ್ಮ ಮಕ್ಕಳ ಮೇಲೆ ಇಂಥ ಕೇಸ್ ಹಾಕಲ್ಲ. ಸುರ್ಜೇವಾಲಾ ಅವರಿಂದ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದರು.