ಬೆಂಗಳೂರು: ಶಾಪಿಂಗ್’ಗೆ ಹೋಗಿ ಬಂದ ವಿಚಾರಕ್ಕೆ ಶುರುವಾದ ಗಲಾಟೆ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆ ಪದ್ಮಜಾ (29), ಮತ್ತು ಆರೋಪಿ ಪತಿ ಹರೀಶ್ – ಇಬ್ಬರೂ ಶ್ರೀನಿವಾಸಪುರ ಮೂಲದವರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದರು.
Advertisement
ಪತಿ ಹರೀಶ್ ಇತ್ತೀಚೆಗಷ್ಟೇ ಕೆಲಸ ಬಿಟ್ಟಿದ್ದನು. ಪತ್ನಿಯ ಜೊತೆ ಸಂಸಾರಿಕ ಜೀವನ ನಡೆಸದೆ ಪ್ರತಿ ದಿನ ಗಲಾಟೆ ಮಾಡ್ತಿದ್ದನು. ಇಂದು ಪತ್ನಿ ಪದ್ಮಜಾ ಶಾಪಿಂಗ್‌ನಿಂದ ಮನೆಗೆ ಮರಳಿದ್ದ ಹಿನ್ನೆಲೆಯಲ್ಲಿ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದ್ದು,
ಗಲಾಟೆ ವೇಳೆ ಪತ್ನಿಯ ಕುತ್ತಿಗೆ ಹಿಸುಕಿ ಹಲ್ಲೆ ಮಾಡಿದ ಬಳಿಕ ನೆಲಕ್ಕೆ ಬೀಳಿಸಿ ಪದ್ಮಜಾ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ. ಪೊಲೀಸರು ಹರೀಶ್ ಕುಮಾರ್‌ನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.