ಅನುದಾನ ತಾರತಮ್ಯ ಗಮನ ಸೆಳೆಯಲು ಸಿಎಂ, ಡಿಸಿಎಂ ದೆಹಲಿಗೆ: ರಣದೀಪ್ ಸಿಂಗ್ ಸುರ್ಜೇವಾಲ

0
Spread the love

ಬೆಂಗಳೂರು: ಅನುದಾನ ತಾರತಮ್ಯ ಗಮನ ಸೆಳೆಯಲು ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾಯಕತ್ವ ಬಗ್ಗೆ ಚರ್ಚೆ ಮಾಡುವ ಸಭೆ ನಿಗದಿಯಾಗಿಲ್ಲ. ಅನುದಾನ ತಾರತಮ್ಯದ ಗಮನ ಸೆಳೆಯಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೋಗಿದ್ದಾರೆ.

Advertisement

ಕಳಸಾ ಬಂಡೂರಿಗೆ ಕೇಂದ್ರ ಅನುಮತಿ ನೀಡಿಲ್ಲ. ಮೇಕೆದಾಟು ಯೋಜನೆಯನ್ನು ಹಿಡಿದಿಟ್ಟುಕೊಂಡಿದೆ. ಇದೆಲ್ಲದರ ಬಗ್ಗೆ ಗಮನ ಸೆಳೆಯಲು ದೆಹಲಿಗೆ ಸಿಎಂ ಡಿಸಿಎಂ ಹೋಗಿದ್ದಾರೆ. ಜಿಎಸ್​​​ಟಿ ಪರಿಹಾರವನ್ನು ತಡೆಹಿಡಿಯಲಾಗಿದೆ ಅದರ ಬಗ್ಗೆ ಸಿಎಂ, ಡಿಸಿಎಂ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here