ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಳಸಾಪುರ ರಿಂಗ್ ರೋಡ್‌ನಲ್ಲಿ ಸೇವಾಲಾಲ್ ಸರ್ಕಲ್ ನಿರ್ಮಾಣ ಮಾಡುವ ಕುರಿತು ಸೋಮು ಲಮಾಣಿ ನೇತೃತ್ವದಲ್ಲಿ ಬಂಜಾರಾ ಸಮಾಜದ ಎಲ್ಲಾ ಹಿರಿಯರು ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ನಾಮನಿರ್ದೇಶಕ ಬಸವರಾಜ್ ಕಡೆಮನಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಮನವಿ ಸಲ್ಲಿಸಿದರು.
Advertisement
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕುಬೇರಪ್ಪ ಪವಾರ, ಸೋಮು ಲಮಾಣಿ, ಕೆ.ಸಿ. ನಭಾಪುರ, ವಿಠ್ಠಲ ದೊಡ್ಡಮನಿ, ನೇಮಪ್ಪ ಲಮಾಣಿ, ಪುಟ್ಟಪ್ಪ ಗುಡಿಮನಿ, ಕುಮಾರ ಪವಾರ, ತಿಪ್ಪಣ್ಣ ಪವಾರ, ಗೋಪಾಲ ಪೂಜಾರ, ಪಾಂಡು ಚವ್ಹಾಣ, ನೀಲು ರಾಠೋಡ, ತುಕಾರಾಮ ಲಮಾಣಿ, ಆಕಾಶ ಲಮಾಣಿ, ಅನಿಲ್ ಕಾರಭಾರಿ, ಲೋಕೇಶ್ ಕಟ್ಟಿಮನಿ, ರವೀಂದ್ರ ಇನಾಮತಿ, ಪ್ರಕಾಶ ಬೆಂತೂರ, ದುರಗೇಶ ವಿಭೂತಿ, ಠಾಕಪ್ಪ ಚವಾಣ, ತಾಲಪ್ಪ ಜಾಧವ, ಠಾಕುರ ಲಮಾಣಿ ಮುಂತಾದವರಿದ್ದರು.