ಧಾರವಾಡ: ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ಎರಡನೇ ಬಾರಿ ಅಕ್ರಮವಾಗಿ ಎರೆಉ ಬಾರಿ ಅಕ್ರಮವಾಗಿ ಪರಿಹಾರ ಬಿಡುಗಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ನಕಲಿ ದಾಖಲೆ ಸೃಷ್ಟಿ ಮಾಡಿದ ಆರೋಪದಡಿ ರವಿ ಕುರುಬೆಟ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ, 2010–2012ರ ಅವಧಿಯಲ್ಲಿ ಮೊದಲ ಪರಿಹಾರ ನೀಡಲಾಗಿತ್ತು. ಆದರೆ 2021–22ರಲ್ಲಿ ಎರಡನೇ ಬಾರಿ ₹19.99 ಕೋಟಿ ಪರಿಹಾರವನ್ನು ಮತ್ತೆ ಬಿಡುಗಡೆ ಮಾಡಲಾಗಿತ್ತು. ಈ ಕುರಿತು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು.
ಒಟ್ಟು ₹72 ಕೋಟಿ ರೂಪಾಯಿಯ ಅಕ್ರಮ ಹಣ ವ್ಯವಹಾರ ನಡೆದಿರುವುದು ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಣ ಬಿಡುಗಡೆಗೆ ನಕಲಿ ದಾಖಲೆಗಳು ಸೃಷ್ಟಿ ಮಾಡಲಾಗಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ರವಿ ಕುರುಬೆಟ್ ರನ್ನು ಇಡಿ ವಶಕ್ಕೆ ಪಡೆದಿದೆ.