ಬೆಂಗಳೂರು: ಅಸಭ್ಯ ವಾಗಿ ಕಾಣುವಂತೆ ಯುವತಿಯರ ಫೋಟೋ, ವಿಡಿಯೋಗಳನ್ನ ಚಿತ್ರಿಸಿ ಪೋಸ್ಟ್ ಮಾಡ್ತಿದ್ದ ಯುವಕನನ್ನು ಅರೆಸ್ಟ್ ಮಾಡಲಾಗಿದೆ. 26 ವರ್ಷದ ಗುರುದೀಪ್ ಸಿಂಗ್ ಬಂಧಿತ ಆರೋಪಿಯಾಗಿದ್ದು,
Advertisement
ಆರೋಪಿ, ಹೋಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಪಡೆದು ಕೆಲಸಕ್ಕಾಗಿ ಹುಡುಕಾಡ್ತಿದ್ದ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಯುವತಿಯರ ಅಸಭ್ಯ ಫೋಟೋ, ವಿಡಿಯೋಗಳನ್ನ ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡ್ತಿದ್ದನು.
ಈ ಬಗ್ಗೆ ಯುವತಿಯೊಬ್ಬಳು ಪೊಲೀಸರನ್ನು ಟ್ಯಾಗ್ ಮಾಡಿ ದೂರು ನೀಡಿದ್ದಳು. ಈ ದೂರಿನ ಆಧಾರದ ಮೇಲೆ ಬನಶಂಕರಿ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.